ಬೆಂಗಳೂರು ಬ್ರದರ್ಸ್‌ ‘97ರ’ ಸಾಧನೆ

7

ಬೆಂಗಳೂರು ಬ್ರದರ್ಸ್‌ ‘97ರ’ ಸಾಧನೆ

Published:
Updated:
Prajavani

ಬೆಂಗಳೂರು: ಇಬ್ಬರೂ ಸಹೋದರರು; ಬೆಂಗಳೂರಿನಲ್ಲಿ ಬೆಳೆದವರು. ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದವರು. ವಿಶ್ವದ ಎರಡು ವಿಭಿನ್ನ ಭಾಗದಲ್ಲಿ ಒಂದೇ ದಿನ ಪಂದ್ಯಗಳನ್ನು ಆಡಿದ ಇವರು ಒಂದೇ ಮೊತ್ತ ಗಳಿಸಿದ್ದು ಕಾಕತಾಳೀಯ.

ಇದು ನಡೆದದ್ದು ಡಿಸೆಂಬರ್‌ 15ರಂದು. ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಆಲ್‌ ಸ್ಟಾರ್ಸ್‌ ಪರ ಜಸ್‌ಕರಣ್‌ ಮಲ್ಹೋತ್ರ 97 ರನ್ ಗಳಿಸಿ ಔಟಾದರು. ಸೋಮರ್‌ಸೆಟ್‌ ಕ್ಯಾವಲಿಯರ್ಸ್ ಎದುರು ಅವರು ಈ ಸಾಧನೆ ಮಾಡಿದ್ದರು.

ಅದೇ ದಿನ ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯೊಂದರಲ್ಲಿ ಜಸ್‌ಕರಣ್ ಅವರ ಕಿರಿಯ ಸಹೋದರ ಸಾಹಿಬ್‌ ಮಲ್ಹೋತ್ರ, ತಲ್ಲಂಗಟ್ಟ ಕ್ರಿಕೆಟ್ ಕ್ಲಬ್‌ ಪರ 97 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಜಸ್‌ಕರಣ್‌ 2013ರಲ್ಲಿ ಅಮೆರಿಕಕ್ಕೆ ತೆರಳಿ, ರಾಷ್ಟ್ರೀಯ ತಂಡದ ಉಪನಾಯಕ ಆಗಿದ್ದರು.

ಸಾಹಿಬ್‌ ಪುಣೆಯ ಎಂಆರ್‌ಎಫ್ ಪೇಸ್ ಫೌಂಡೇಷನ್‌ನಲ್ಲಿ ತರಬೇತಿ ಪಡೆದಿದ್ದರು. ವೇಗದ ಬೌಲರ್ ಆಗಿರುವ ಅವರು ಬೆಂಗಳೂರಿನಲ್ಲಿ ನಡೆದಿದ್ದ ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ವಿರುದ್ಧ ಗಮನಾರ್ಹ ಸಾಧನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !