ಬೆಂಗಳೂರು: ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್ ತಂಡವು ಕೆಎಸ್ಸಿಎ ಗುಂಪು 2, ಡಿವಿಷನ್ –1ರ ಲೀಗ್ ಕಮ್ ನಾಕೌಟ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಬುಧವಾರ 50 ರನ್ಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಮಣಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲು ಗಾಲಿ ಕಾರ್ಖಾನೆ ತಂಡವು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 182 ರನ್ ಪೇರಿಸಿತು. ಜಾಸ್ಪರ್ ಇ.ಜೆ. 51 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ಗಳಿದ್ದವು. ಆಲ್ರೌಂಡರ್ ಅಕ್ಷಯ್ ಸಿ.ಕೆ. 43 ರನ್ ಗಳಿಸಿದರು.

ಸವಾಲಿನ ಗುರಿ ಬೆನ್ನಟ್ಟಿದ ಕೆನರಾ ಬ್ಯಾಂಕ್ ತಂಡವು ಅಕ್ಷಯ್ (13ಕ್ಕೆ4) ಹಾಗೂ ಸಯ್ಯದ್ ಖಾಜಾ ಮೊಯಿನುದ್ದೀನ್ (11ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.1 ಓವರ್ಗಳಲ್ಲಿ 132 ರನ್ಗಳಿಗೆ ಸರ್ವಪತನವಾಯಿತು. ಕೃಷವ್ ಸೋಮಸುಂದರ್ (56; 44ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ವಿಫಲರಾದರು.

ಸಂಕ್ಷಿಪ್ತ ಸ್ಕೋರು: ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್: 20 ಓವರ್ಗಳಲ್ಲಿ 7 ವಿಕೆಟ್ಗೆ 182 (ಜಾಸ್ಪರ್ ಇ.ಜೆ. ಔಟಾಗದೇ 93, ಅಕ್ಷಯ್ ಸಿ.ಕೆ. 43; ನವೀನ್ ಎಂ.ಜಿ. 37ಕ್ಕೆ2, ಲವಿಶ್ ಕೌಶಲ್ 46ಕ್ಕೆ2). ಕೆನರಾ ಬ್ಯಾಂಕ್: 19.1 ಓವರ್ಗಳಲ್ಲಿ 132 (ಕೃಷವ್ ಸೋಮಸುಂದರ್ 56; ಅಕ್ಷಯ್ ಸಿ.ಕೆ. 13ಕ್ಕೆ4, ಎಸ್.ಕೆ. ಮೊಯಿನುದ್ದೀನ್ 11ಕ್ಕೆ3, ಮನ್ವಂತ್ ಕುಮಾರ್ ಎಲ್. 17ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.