ಬೆಂಗಳೂರು: ಯುವ ಅಟಗಾರರು ಐಪಿಎಲ್ ಟೂರ್ನಿಯ ಥಳಕು, ಬಳುಕಿಗೆ ಮೈಮರೆಯಬಾರದು. ಕ್ರಿಕೆಟ್ ಕ್ಷೇತ್ರದಲ್ಲಿ ಗೌರವಾದರ ಗಳಿಸಿಕೊಳ್ಳಬೇಕಾದರೆ ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿಯಾಗಬೇಕು ಎಂದು ‘ಚೇಸಿಂಗ್ ಮಾಸ್ಟರ್’ ವಿರಾಟ್ ಕೊಹ್ಲಿ ಹೇಳಿದರು.

‘ಹಣದ ಆಕರ್ಷಣೆ ದೊಡ್ಡದು. ಆದರೆ ಹಣಗಳಿಕೆಯೊಂದೇ ಮುಖ್ಯವಲ್ಲ. ಐಪಿಎಲ್ನಲ್ಲಿ ಬಹಳಷ್ಟು ಹಣ ಸಿಗುತ್ತದೆ. ಅಲ್ಪ ಸಮಯದಲ್ಲಿಯೇ ಖ್ಯಾತಿಯೂ ಲಭಿಸುತ್ತದೆ. ಐಪಿಎಲ್ನಲ್ಲಿ ಗಳಿಸುವ ಹಣವು ಜೀವನವನ್ನು ಸುಸ್ಥಿರಗೊಳಿಸಲು ಸಾಕಾಗುತ್ತದೆ. ದೀರ್ಘ ಸಮಯದವರೆಗೆ ಒತ್ತಡವನ್ನು ನಿರ್ವಹಿಸುತ್ತ ಇರುವುದಕ್ಕಿಂತ ಚುಟುಕು ಮಾದರಿಯಲ್ಲಿ ಆಡಿಹೋಗುವುದು ಒಳ್ಳೆಯದು ಎಂಬ ಭಾವ ಬೆಳೆಯುವುದು ಸಹಜ. ಆದರೆ 15–20 ವರ್ಷಗಳಷ್ಟು ದೀರ್ಘ ಕಾಲ ಆಡಿ ಕ್ರಿಕೆಟ್ ಲೋಕದಲ್ಲಿ ಗೌರವ ಮತ್ತು ಮಾನ್ಯತೆ ಗಳಿಸಬೇಕು. ಆ ಮೂಲಕ ನಮಗೆ ಪ್ರೇರಣೆಯಾದ ಹೀರೊಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಅದೊಂದು ವಿಭಿನ್ನ ಅನುಭೂತಿ. ಅದನ್ನು ಈಡೇರಿಸಲು ಸದಾ ಕ್ರಿಯಾಶೀಲರಾಗಿರಬೇಕು. ದೀರ್ಘ ಕಾಲದ ಪಯಣಕ್ಕಾಗಿ ಬದ್ಧವಾಗಿರುವುದು ಬಹಳ ಕಷ್ಟದ ಕೆಲಸ’ ಎಂದರು.

‘ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸ್ಲೆನ್ಸ್’ನಲ್ಲಿ ಆಯೋಜಿಸಲಾಗಿದ್ದ ಆರ್ಸಿಬಿ ಇನೋವೆಷನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಕಮ್ಮಟದಲ್ಲಿ ಅವರು ಭಾಗವಹಿಸಿದ್ದರು. ‘ಎಲ್ಲಕ್ಕಿಂತ ಮನಸ್ಸೇ ಮಿಗಿಲು; ಸಾಧನೆಯ ಉತ್ತುಂಗದಲ್ಲಿ ವಿರಾಟ್ ಕೊಹ್ಲಿ’ ಎಂಬ ವಿಷಯದ ಕುರಿತು ಕ್ರಿಕೆಟ್ ನಿರೂಪಕಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಸಂವಾದ ನಡೆಸಿದರು.

‘ಕೆಲವು ವರ್ಷಗಳ ಹಿಂದೆ ನಾನು ಭಾರತ ತಂಡದ ನಾಯಕತ್ವ ವನ್ನು ಬಿಟ್ಟೆ. ಹಲವು ವರ್ಷಗಳಿಂದ ಅಪಾರ ಒತ್ತಡವನ್ನು ಹೊತ್ತುಕೊಂಡು ಕಾರ್ಯನಿರ್ವಹಿಸಿದ್ದೆ. ಜನರ ನಿರೀಕ್ಷೆಗಳ ಭಾರ ಅದು. ನಾಯಕತ್ವದ ತ್ಯಜಿಸಿದಾಗ ನಿರುಮ್ಮಳತೆ ಮನೆ ಮಾಡಿತು. ಹೆಚ್ಚು ಮುಕ್ತನಾಗಿ ಮಾತನಾಡತೊಡಗಿದೆ. ಆ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ (ದ್ರಾವಿಡ್)ಭಾಯ್ ಮತ್ತು ವಿಕ್ರಮ್ ರಾಥೋಡ್ ಅವರೊಂದಿಗೆ ಹೆಚ್ಚು ನಿಕಟವಾದೆ. ಅವರು ತೋರಿದ ಕಾಳಜಿಗೆ ನಾನು ಸದಾ ಆಭಾರಿ. ಅದರ ಫಲವಾಗಿ 2023ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಿದೆ. ಭೇಟಿಯಾದಾಗಲೆಲ್ಲ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು 37 ವರ್ಷದ ಕೊಹ್ಲಿ ಹೇಳಿದರು.

2022ರಲ್ಲಿ ದಕ್ಷಿಣ ಆಫ್ರಿಕಾ ಎದುರು 2–1ರಿಂದ ಭಾರತವು ಟೆಸ್ಟ್ ಸರಣಿ ಸೋತಿತ್ತು. ಆಗ ನಾಯಕರಾಗಿದ್ದ ಕೊಹ್ಲಿ ಅವರು ಬ್ಯಾಟಿಂಗ್ನಲ್ಲಿಯೂ ವೈಫಲ್ಯ ಅನುಭವಿಸಿದ್ದರು. 11 ಇನಿಂಗ್ಸ್ಗಳಲ್ಲಿ 26.50ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಆದರೆ 2023ರಲ್ಲಿ ಅಮೋಘ ಆಟವಾಡಿದರು. 12 ಇನಿಂಗ್ಸ್ಗಳಲ್ಲಿ 55.91ರ ಸರಾಸರಿಯಲ್ಲಿ ರನ್ ಗಳಿಸಿದರು.

ಈ ಕಮ್ಮಟದಲ್ಲಿ ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಮತ್ತಿತತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1471608096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.