ಕೆಎಸ್‌ಸಿಎ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ: ಫೈನಲ್‌ಗೆ ಬೆಂಗಳೂರು ಅಕೇಷನಲ್ಸ್‌

7

ಕೆಎಸ್‌ಸಿಎ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ: ಫೈನಲ್‌ಗೆ ಬೆಂಗಳೂರು ಅಕೇಷನಲ್ಸ್‌

Published:
Updated:

ಬೆಂಗಳೂರು: ರೋಹಿತ್‌ ಎಸ್‌ಎಸ್‌ಜಿ (36ಕ್ಕೆ5) ಮತ್ತು ವಿ.ಉತ್ತಮ್‌ ಗೌಡ (38ಕ್ಕೆ4) ಅವರ ಚುರುಕಿನ ಬೌಲಿಂಗ್‌ ನೆರವಿನಿಂದ ಬೆಂಗಳೂರು ಅಕೇಷನಲ್ಸ್‌ ತಂಡ 19 ವರ್ಷದೊಳಗಿನವರ ಕೆಎಸ್‌ಸಿಎ ಗುಂಪು–1, ಡಿವಿಷನ್‌–1,2 ಮತ್ತು 3ರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಆರ್‌.ಆರ್‌.ಎಂ.ಸಿ ಮೈದಾನದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಅಕೇಷನಲ್ಸ್‌ ತಂಡ 4 ವಿಕೆಟ್‌ಗಳಿಂದ ಜಾಲಿ ಕ್ರಿಕೆಟರ್ಸ್‌ ವಿರುದ್ಧ ಗೆದ್ದಿದೆ.

ಜೆ.ಎಸ್‌.ಎಸ್‌.ಮೈದಾನದಲ್ಲಿ ನಡೆದ ಸೋಷಿಯಲ್‌ ಕ್ರಿಕೆಟರ್ಸ್‌ ಮತ್ತು ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2) ನಡುವಣ ಎರಡನೆ ಸೆಮಿಫೈನಲ್‌ ಹೋರಾಟ ಡ್ರಾ ಆಗಿದೆ.

ಸಂಕ್ಷಿಪ್ತ ಸ್ಕೋರ್‌: ಜಾಲಿ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌, 65.5 ಓವರ್‌ಗಳಲ್ಲಿ 173 (ಜೆ.ಜಿ.‍ಪ್ರೇಮನಾಥ್‌ 36, ವಿಶಾಲ್‌ ಕೊಠಾರಿ ಔಟಾಗದೆ 31; ವಿ.ಉತ್ತಮ್‌ ಗೌಡ 35ಕ್ಕೆ3, ಹನುಮಂತ 30ಕ್ಕೆ2, ರೋಹಿತ್‌ ಎಸ್‌ಎಸ್‌ಜಿ 57ಕ್ಕೆ4). ಎರಡನೆ ಇನಿಂಗ್ಸ್‌: 24.4 ಓವರ್‌ಗಳಲ್ಲಿ 143 (ಸಾಯಿದೀಪ್‌ ಗಣೇಶ್‌ 43, ಕೆ.ಎಲ್‌.ಪ್ರತೀಕ್‌ 43; ವಿ.ಉತ್ತಮ್‌ ಗೌಡ 38ಕ್ಕೆ4, ರೋಹಿತ್‌ ಎಸ್‌ಎಸ್‌ಜಿ 36ಕ್ಕೆ5).

ಬೆಂಗಳೂರು ಅಕೇಷನಲ್ಸ್‌: ಪ್ರಥಮ ಇನಿಂಗ್ಸ್‌, 45.3 ಓವರ್‌ಗಳಲ್ಲಿ 177 (ರೋಹಿತ್‌ ಎಸ್‌ಎಸ್‌ಜಿ 47, ಭೀಮ ರಾವ್‌ 31, ವಿ.ಉತ್ತಮ್‌ ಗೌಡ ಔಟಾಗದೆ 36; ಸಿರೀಶ್‌ ಪಾಟೀಲ 26ಕ್ಕೆ2, ಎಸ್‌.ಎಂ.ಸಮಂತ್‌ 37ಕ್ಕೆ2, ವಿಶಾಲ್‌ ಕೊಠಾರಿ 48ಕ್ಕೆ4). ಎರಡನೆ ಇನಿಂಗ್ಸ್‌: 32.1 ಓವರ್‌ಗಳಲ್ಲಿ 6 ವಿಕೆಟ್‌ಗೆ 143 (ಕಿಶಾನ್‌ ಮೇಘರಾಜ್‌ 29, ಪೃಥ್ವಿ ಸದಾನಂದ 30, ಶ್ರೀಹರಿ ಔಟಾಗದೆ 44; ಸಿರೀಶ್‌ ಪಾಟೀಲ 18ಕ್ಕೆ3).

ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ಗೆ 4 ವಿಕೆಟ್‌ ಜಯ.

ಸೋಷಿಯಲ್‌ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌, 38 ಓವರ್‌ಗಳಲ್ಲಿ 114 (ಮುನಿಮ್‌ ಮೆಹದಿ 38, ಹರ್ಷ ಪಿ.ಪೊವುಜದಾರ್‌ 22; ವಿದ್ಯಾಧರ ಪಾಟೀಲ 43ಕ್ಕೆ4, ಶುಭಂ ಕುಮಾರ್‌ ಸಿನ್ಹಾ 18ಕ್ಕೆ4). ಎರಡನೆ ಇನಿಂಗ್ಸ್‌: 43 ಓವರ್‌ಗಳಲ್ಲಿ 2 ವಿಕೆಟ್‌ಗೆ 193 (ರವಿಚಂದ್ರ ಉಕ್ಕಲಿ 78, ಅಕ್ಸನ್‌ ರಾವ್‌ ಔಟಾಗದೆ 46, ಎಸ್‌.ಆದರ್ಶ್‌ ಪ್ರಜ್ವಲ್‌ ಔಟಾಗದೆ 49).

ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): ಮೊದಲ ಇನಿಂಗ್ಸ್‌, 85.1 ಓವರ್‌ಗಳಲ್ಲಿ 298 (ಮೊಹಮ್ಮದ್‌ ಎ ಜವಾದ್‌ 30, ಕಪಿಲ್‌ ಬೇನಿವಾಲ್‌ 49, ಜಸ್ವಂತ್‌ ಆಚಾರ್ಯ 26, ಕೆ.ವಿ.ಅನೀಶ್‌ 106, ಜಿ.ಅಜಿತೇಶ್‌ 29; ಮುನಿಮ್‌ ಮೆಹದಿ 53ಕ್ಕೆ3, ರೋಹನ್‌ ನಾಯಕರ್‌ 29ಕ್ಕೆ2, ಸಿದ್ದಾರ್ಥ್‌ ಗೊಧ್ವಾನಿ 70ಕ್ಕೆ4).

ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !