ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ತಿಂಗಳ ಕ್ರಿಕೆಟಿಗರು ಪ್ರಶಸ್ತಿ: ರಾಜೇಶ್ವರಿ, ಭುವನೇಶ್ವರ್ ಹೆಸರು ಶಿಫಾರಸು

ಐಸಿಸಿ ತಿಂಗಳ ಕ್ರಿಕೆಟಿಗರು ಪ್ರಶಸ್ತಿ: ಪಟ್ಟಿಯಲ್ಲಿ ಪೂನಂ ರಾವತ್, ರಶೀದ್ ಖಾನ್
Last Updated 8 ಏಪ್ರಿಲ್ 2021, 15:17 IST
ಅಕ್ಷರ ಗಾತ್ರ

ದುಬೈ: ಭಾರತದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಅವರ ಹೆಸರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಾರ್ಚ್ ತಿಂಗಳ ಆಟಗಾರರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರು ಅಮೋಘ ಸಾಮರ್ಥ್ಯ ತೋರಿದ್ದರು. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಸರಣಿಯಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿಕೊಂಡಿದ್ದರು.

ಪುರುಷರ ವಿಭಾಗದಲ್ಲಿ ಅಫ್ಗಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್‌ ಮತ್ತು ‌ಜಿಂಬಾಬ್ವೆಯ ಸೀನ್ ವಿಲಿಯಮ್ಸ್‌, ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಲಿಜೆಲಿ ಲೀ ಮತ್ತು ಭಾರತದ ಪೂನಂ ರಾವತ್ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ.

ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಆರು ವಿಕೆಟ್ ಕಬಳಿಸಿದ್ದರು. ಟಿ20 ಸರಣಿಯಲ್ಲಿ ನಾಲ್ಕು ವಿಕೆಟ್ ಗಳಿಸಿದ್ದರು. ರಶೀದ್ ಖಾನ್ ಜಿಂಬಾಬ್ವೆ ಎದುರಿನ ಟೆಸ್ಟ್ ಸರಣಿಯಲ್ಲಿ 11 ವಿಕೆಟ್ ಉರುಳಿಸಿದ್ದರು. ವಿಲಿಯಮ್ಸ್ 264 ರನ್ ಗಳಿಸಿ ಎರಡು ವಿಕೆಟ್ ಕೂಡ ಕೆಡವಿದ್ದರು.

ರಾಜೇಶ್ವರಿ ಗಾಯಕವಾಡ್ ಏಕದಿನ ಸರಣಿಯಲ್ಲಿ 3.56ರ ಇಕಾನಮಿಯಲ್ಲಿ ಒಟ್ಟು ಎಂಟು ವಿಕೆಟ್ ಉರುಳಿಸಿದ್ದರು. ಟಿ20 ಸರಣಿಯಲ್ಲಿ ನಾಲ್ಕು ವಿಕೆಟ್ ಉರುಳಿಸಿದ್ದರು. ಪೂನಂ ರಾವತ್ ಏಕದಿನ ಸರಣಿಯಲ್ಲಿ 263 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT