ಶುಕ್ರವಾರ, ಏಪ್ರಿಲ್ 16, 2021
31 °C
ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್, ವಿದರ್ಭಕ್ಕೆ ಭಾರಿ ಗೆಲುವು

ಕೆಎಸ್‌ಸಿಎ ಇಲೆವನ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೇಗಿ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ ಜೋಡಿ ಜೆ.ಸುಚಿತ್‌–ಶ್ರೇಯಸ್ ಗೋಪಾಲ್ ಅವರು ಅಮೋಘ ಬೌಲಿಂಗ್ ದಾಳಿಯ ಮೂಲಕ ಕೇರಳ ಕ್ರಿಕೆಟ್ ಸಂಸ್ಥೆ ತಂಡವನ್ನು ಕಂಗೆಡಿಸಿದರು. ಇದರ ಪ‍ರಿಣಾಮ ಕೆಎಸ್‌ಸಿಎ ಇಲೆವನ್ ತಂಡ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ 285 ರನ್‌ಗಳ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಭಾರತೀಯ ವಾಯುಪಡೆ ಮೈದಾನ: ಕೆಎಸ್‌ಸಿಎ ಇಲೆವನ್ 497 ಮತ್ತು 215; ಕೇರಳ ಕ್ರಿಕೆಟ್ ಸಂಸ್ಥೆ: 246 ಮತ್ತು 57 ಓವರ್‌ಗಳಲ್ಲಿ 182 (ಮೊಹಮ್ಮದ್ ಅಜರುದ್ದೀನ್ 62, ಆಸಿಫ್‌ ಕೆ.ಎಂ 24; ಪ್ರಸಿದ್ಧ ಕೃಷ್ಣ 19ಕ್ಕೆ3, ಟಿ.ಪ್ರದೀಪ್ 26ಕ್ಕೆ1, ಜೆ.ಸುಚಿತ್ 63ಕ್ಕೆ4, ಶ್ರೇಯಸ್ ಗೋಪಾಲ್ 18ಕ್ಕೆ2). ಫಲಿತಾಂಶ: ಕೆಎಸ್‌ಸಿಎ ಇಲೆವನ್‌ಗೆ 285 ರನ್‌ಗಳ ಗೆಲುವು.

ಆರ್‌ಎಸ್‌ಐ ಮೈದಾನ: ಟೀಮ್ ರಾಜಸ್ಥಾನ: ಮೊದಲ ಇನಿಂಗ್ಸ್‌: 369; ಕೆಎಸ್‌ಸಿಎ ಕೋಲ್ಟ್ಸ್‌: 8ಕ್ಕೆ530; ಟೀಮ್ ರಾಜಸ್ಥಾನ: ಎರಡನೇ ಇನಿಂಗ್ಸ್‌: 69 ಓವರ್‌ಗಳಲ್ಲಿ 4ಕ್ಕೆ 240 (ಯಶ್‌ ಔಟಾಗದೆ 101, ಚೇತನ್ ಬಿಶ್ಟ್‌ 40, ಆದಿತ್ಯ ಘರ್ವಾಲ್‌ 46). ಫಲಿತಾಂಶ: ಪಂದ್ಯ ಡ್ರಾ; ಕೆಎಸ್‌ಸಿಎ ಕೋಲ್ಟ್ಸ್‌ಗೆ ಮೊದಲ ಇನಿಂಗ್ಸ್ ಮುನ್ನಡೆ. ಆಲೂರು 1ನೇ ಮೈದಾನ: ಮುಂಬೈ ಕ್ರಿಕೆಟ್ ಸಂಸ್ಥೆ: 190 ಮತ್ತು 167; ಛತ್ತೀಸ್‌ಗಡ ಕ್ರಿಕೆಟ್ ಸಂಸ್ಥೆ: 337 ಮತ್ತು 4.4 ಓವರ್‌ಗಳಲ್ಲಿ 1ಕ್ಕೆ21. ಫಲಿತಾಂಶ: ಛತ್ತೀಸಗಡ ತಂಡಕ್ಕೆ 9 ವಿಕೆಟ್ ಜಯ.

ಆಲೂರು 2ನೇ ಮೈದಾನ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 380 ಮತ್ತು 2ಕ್ಕೆ 243 ಡಿಕ್ಲೇರ್‌; ಬಂಗಾಳ ಕ್ರಿಕೆಟ್ ಸಂಸ್ಥೆ: 178 ಮತ್ತು 362. ಫಲಿತಾಂಶ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಗೆ 83 ರನ್‌ ಜಯ. ಚಿನ್ನಸ್ವಾಮಿ ಕ್ರೀಡಾಂಗಣ: ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ: 331 ಮತ್ತು 311; ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ: 306 ಮತ್ತು 3ಕ್ಕೆ 156. ಫಲಿತಾಂಶ: ಪಂದ್ಯ ಡ್ರಾ; ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿಗೆ ಮೊದಲ ಇನಿಂಗ್ಸ್‌ ಮುನ್ನಡೆ.

ಕಿಣಿ ಸ್ಪೋರ್ಟ್ಸ್ ಅರೆನಾ: ವಿದರ್ಭ ಕ್ರಿಕೆಟ್ ಅಕಾಡೆಮಿ: 6ಕ್ಕೆ 635 ಡಿಕ್ಲೇರ್‌; ಕೆಎಸ್‌ಸಿಎ ಕಾರ್ಯದರ್ಶಿಗಳ ಇಲೆವನ್: 379 ಮತ್ತು 34.1 ಓವರ್‌ಗಳಲ್ಲಿ 147 (ಅಮನ್ ಖಾನ್ 42, ಎಚ್‌.ಎಸ್‌.ಶರತ್‌ 59; ನಿಚಿಕೇತ್ ಭೂತೆ 18ಕ್ಕೆ6). ಫಲಿತಾಂಶ: ವಿದರ್ಭ ಕ್ರಿಕೆಟ್ ಸಂಸ್ಥೆ ತಂಡಕ್ಕೆ ಇನಿಂಗ್ಸ್‌, 121 ರನ್‌ಗಳ ಗೆಲುವು.

ಎಸ್‌ಜೆಸಿಇ ಮೈದಾನ, ಮೈಸೂರು: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 296 ಮತ್ತು 212; ಆಂಧ್ರ ಕ್ರಿಕೆಟ್ ಸಂಸ್ಥೆ 116 ಮತ್ತು 366 (ಶೋಯೆಬ್‌ ಮೊಹಮ್ಮದ್ ಖಾನ್ 42; ಕೌಶಿಕ್ ವಿ 39ಕ್ಕೆ1, ಭವೇಶ್ ಗುಲೇಚಾ 64ಕ್ಕೆ2, ಡಿ.ಅವಿನಾಶ್‌ 47ಕ್ಕೆ1, ರಿತೇಶ್ ಭಟ್ಕಳ 112ಕ್ಕೆ3, ಪವನ್ ದೇಶಪಾಂಡೆ 19ಕ್ಕೆ3). ಫಲಿತಾಂಶ: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ 26 ರನ್‌ಗಳ ಜಯ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ, ಮೈಸೂರು: ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: 228 ಮತ್ತು 176; ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 6ಕ್ಕೆ501. ಫಲಿತಾಂಶ: ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಗೆ ಇನಿಂಗ್ಸ್ ಮತ್ತು 97 ರನ್‌ಗಳ ಜಯ.       

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.