ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ | ತಂಡಕ್ಕೆ ಶಿಸ್ತಿನ ಕೊರತೆ: ಹಿರಿಯ ಆಟಗಾರರ ಟೀಕೆ

Last Updated 2 ಮಾರ್ಚ್ 2020, 17:08 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ 0–2 ಮುಖಭಂಗ ಅನುಭವಿಸಿದ ವಿರಾಟ್‌ ಕೊಹ್ಲಿ ಪಡೆಯ ಕಾರ್ಯತಂತ್ರವನ್ನು ಬಿಷನ್‌ ಸಿಂಗ್ ಬೇಡಿ, ಸಂಜಯ್‌ ಮಾಂಜ್ರೇಕರ್‌ ಸೇರಿದಂತೆ ಹಿರಿಯ ಆಟಗಾರರು ಪ್ರಶ್ನಿಸಿದ್ದಾರೆ.

‘ನಂಬರ್‌ ವನ್‌ ಟೆಸ್ಟ್‌ ತಂಡದ ಮೇಲೆ ಕಿವೀಸ್‌ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೂ ಹೇಗೆ?’ ಸಂಯಮದ ಮತ್ತು ಲೆಕ್ಕಾಚಾರ, ಬದ್ಧತೆಯಿಂದ ಆಡಿದ ವಿನೀತ ನ್ಯೂಜಿಲೆಂಡ್‌ ತಂಡವನ್ನು ಶ್ಲಾಘಿಸೋಣ’ ಎಂದು ಬೇಡಿ ಟ್ವೀಟ್‌ ಮಾಡಿದ್ದಾರೆ.

ಟೆಸ್ಟ್‌ ಸರಣಿಯಲ್ಲಿ ಭಾರತ ಶಿಸ್ತಿನಿಂದ ಆಡಿರಲಿಲ್ಲ ಎಂದು ವೆಂಕಟಸಾಯಿ ಲಕ್ಷ್ಮಣ್‌ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಪಡೆ ಸರಣಿಯಲ್ಲಿ ಪೈಪೋಟಿ ಕೂಡ ನೀಡಲಿಲ್ಲ ಎಂದು ತಂಡದ ಮಾಜಿ ಆರಂಭ ಆಟಗಾರ ಆಕಾಶ್‌ ಚೋಪ್ರಾ ಟೀಕಿಸಿದ್ದಾರೆ. ‘ಕೊಹ್ಲಿ ನೇತೃತ್ವದ ತಂಡ ಹೆಚ್ಚಿನ ಟೆಸ್ಟ್‌ಗಳನ್ನು ದೇಶದ ಆಚೆ ಆಡಿದೆ. ಆದರೆ ಭಾರತ ಈ ಬಾರಿ ಪಂದ್ಯದಲ್ಲಿ ಪಾಲ್ಗೊಂಡಿದೆ ಆಷ್ಟೇ. ಬ್ಯಾಟಿಂಗ್‌ ವೈಫಲ್ಯ ಮತ್ತು ನ್ಯೂಜಿಲೆಂಡ್‌ನ ಕೆಳಕ್ರಮಾಂಕವನ್ನು ಬೇಗ ನಿಯಂತ್ರಿಸದಿರುವುದು ಭಾರತಕ್ಕೆ ಮುಳುವಾಯಿತು’ ಎಂದು ಚೋಪ್ರಾ ಹೇಳಿದ್ದಾರೆ. ಮಾಜಿ ಟೆಸ್ಟ್‌ ಪರಿಣತ ಸಂಜಯ್‌ ಮಾಂಜ್ರೇಕರ್‌ ಕೂಡ ಟ್ವಿಟರ್‌ನಲ್ಲಿ ಇಂಥದ್ದೇ ಮಾತನ್ನು ಧ್ವನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT