ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇರದಾಳ ತಾಲ್ಲೂಕು ರಚನೆಗೆ ಎಚ್‌ಡಿಕೆ ಭರವಸೆ’

Last Updated 24 ಏಪ್ರಿಲ್ 2018, 5:51 IST
ಅಕ್ಷರ ಗಾತ್ರ

ತೇರದಾಳ(ಬನಹಟ್ಟಿ): ‘ಕ್ಷೇತ್ರದಲ್ಲಿ ವಿಧಾನ ಸಭೆಯ ಚುನಾವಣೆಯು ರಂಗೇರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಅಭ್ಯರ್ಥಿ ಪ್ರೊ.ಬಸವರಾಜ ಕೊಣ್ಣೂರ ಅವರ ಗೆಲುವೇ ನಮ್ಮ ಗುರಿ. ಕಾರ್ಯಕರ್ತರು ಕೊಣ್ಣೂರ ಅವರ ಗೆಲುವಿಗಾಗಿ ಪ್ರಯತ್ನಿಸಬೇಕು’ ಎಂದು ತಾಲ್ಲೂಕು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ತಿಳಿಸಿದರು.

ತೇರದಾಳ ಪಟ್ಟಣದ 1, 2,ಮತ್ತು 3ನೇ ವಾರ್ಡ್‌ಗಳಲ್ಲಿ ಕೈಗೊಂಡ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೋರಾಟ ಸಮಿತಿ ಅಧ್ಯಕ್ಷ ಭುಜಬುಲಿ ಕೆಂಗಾಲಿ ಮಾತನಾಡಿ, ‘ಈಗಾಗಲೇ ಹೊಸ ತಾಲ್ಲೂಕು ಎಂದು ರಚನೆಯಾದ ರಬಕವಿ- ಬನಹಟ್ಟಿಗೆ ಯಾವ ತೊಂದರೆಯಾಗದಂತೆ ಅಧಿಕಾರ ಬಂದ ಒಂದು ತಿಂಗಳ ಅವಧಿಯ ಒಳಗಾಗಿ ತೇರದಾಳ ಪಟ್ಟಣವನ್ನು ಹೊಸ ತಾಲ್ಲೂಕು ಎಂದು ಘೋಷಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಮಗೆ ಭರವಸೆ ನೀಡಿದ್ದಾರೆ. ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ಬಾರಿ ಜೆಡಿಎಸ್ ಗೆಲುವು ನಿಶ್ಚಿತ’ ಎಂದು ಹೇಳಿದರು.

ಜೆಡಿಎಸ್‌ ಅಭ್ಯರ್ಥಿಯ ಪರವಾಗಿ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಮನೆ ಮನೆ ಪ್ರಚಾರ ಕಾರ್ಯ ಕೈಗೊಂಡರು. ದುಂಡಪ್ಪಾ ಕೊಣ್ಣೂರ ಸುರೇಶ ಹಟ್ಟಿ, ಭೂಪಾಲ ವಾಜಂತ್ರಿ, ಬಸವರಾಜ ಕಲಬುರಗಿ, ಸದಾಶಿವ ದೊಡಮನಿ, ಮುರಿಗೆಪ್ಪ ಹನಗಂಡಿ, ಮಲ್ಲಿಕಾರ್ಜುನ ಪೂಜಾರಿ, ಭರಮಪ್ಪ ಸರಗೊಂಡ, ಜಗಪ್ಪ ನಾಶಿ, ಪ್ರಭು ಬುರುಡ, ಅಸಲಾಮ ನದಾಫ್‌, ಸುಲೇಮಾನ್‌ ಮುಕ್ಕೇರಿ, ಇಕ್ಬಾಲ್‌ ಥರಥರಿ, ಸದಾಶಿವ ಗೋಂಧಳಿ, ಬಾಬು ಭಾವಿ, ಪರಪ್ಪ ಮುಚಂಡಿ, ಸಂಗಪ್ಪ ಗುಡೆಪ್ಪನ್ನವರ ಬಾಪು ಗಾಡಿವಡ್ಡರ, ಸಿದ್ದಪ್ಪಾ ಹುದ್ದಾರ, ಸುಧಾಕರ ದೊಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT