ಅಂಧರ ಕ್ರಿಕೆಟ್: ಭಾರತಕ್ಕೆ ಭಾರಿ ಜಯ

7

ಅಂಧರ ಕ್ರಿಕೆಟ್: ಭಾರತಕ್ಕೆ ಭಾರಿ ಜಯ

Published:
Updated:
Deccan Herald

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ ಭಾರತ ತಂಡ ಅಂಧರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಥಣಿಸಂದ್ರದಲ್ಲಿ ಆಯೋಜಿಸಿರುವ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ 198 ರನ್‌ಗಳಿಂದ ಮಣಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆತಿಥೇಯರು 240 ರನ್‌ ಸೇರಿಸಿದರು. ಆರಂಭಿಕ ಜೋಡಿಯಾದ ಪಂಕಜ್‌ ಭುಯಿ ಮತ್ತು ಅನಿಲ್‌ ಗಾರ್ಗಿಯಾ ಶತಕದ ಜೊತೆಯಾಟವಾಡಿದರು. ಪಂಕಜ್‌ 101 ರನ್ ಗಳಿಸಿದರೆ ಅನಿಲ್‌ 92 ರನ್‌ ಗಳಿಸಿದರು.

ಭಾರಿ ಮೊತ್ತದ ಬೆನ್ನತ್ತಿದ ಇಂಗ್ಲೆಂಡ್‌ ಕೇವಲ 10 ಓವರ್‌ಗಳಲ್ಲಿ 42 ರನ್‌ಗಳಿಗೆ ಆಲೌಟಾಯಿತು. ನಾಯಕ ಅಜಯ್‌ ರೆಡ್ಡಿ ನಾಲ್ಕು ಮತ್ತು ಪಂಕಜ್‌ ಮೂರು ವಿಕೆಟ್ ಕಬಳಿಸಿದರು.

ಮುಂದಿನ ಪಂದ್ಯಗಳು ಗೋವಾದಲ್ಲಿ ನಡೆಯಲಿವೆ. ಭಾನುವಾರ ವಿಶ್ರಾಂತಿ ದಿನವಾಗಿದ್ದು ಸೋಮವಾರ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿವೆ.

ಸಂಕ್ಷಿಪ್ತ ಸ್ಕೋರ್‌: ಭಾರತ: 20 ಓವರ್‌ಗಳಲ್ಲಿ 3ಕ್ಕೆ 240 (ಪಂಕಜ್ ಭುಯಿ 101, ಅನಿಲ್‌ ಗಾರ್ಗಿಯಾ 92); ಇಂಗ್ಲೆಂಡ್‌: 10 ಓವರ್‌ಗಳಲ್ಲಿ 42 (ಅಜಯ್‌ 12ಕ್ಕೆ4, ಪಂಕಜ್‌ 2ಕ್ಕೆ3). ಫಲಿತಾಂಶ: ಭಾರತಕ್ಕೆ 198 ರನ್‌ಗಳ ಜಯ. ಪಂದ್ಯಶ್ರೇಷ್ಠ: ಪಂಕಜ್‌ ಭುಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !