ಅಂಧರ ಕ್ರಿಕೆಟ್‌: ಸರಣಿ ಗೆದ್ದ ಭಾರತ

7

ಅಂಧರ ಕ್ರಿಕೆಟ್‌: ಸರಣಿ ಗೆದ್ದ ಭಾರತ

Published:
Updated:
Deccan Herald

ಬೆಂಗಳೂರು: ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ಅಜಯ್ ಕುಮಾರ್ ರೆಡ್ಡಿ‌, ಇಂಗ್ಲೆಂಡ್ ವಿರುದ್ಧದ ಅಂಧರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಥಣಿಸಂದ್ರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 55 ರನ್‌ಗಳಿಂದ ಗೆದ್ದ ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯರು 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 217 ರನ್‌ ಗಳಿಸಿದರು. ಅಜಯ್‌ ಕುಮಾರ್ ರೆಡ್ಡಿ 44 ಎಸೆತಗಳಲ್ಲಿ ಅಜೇಯ 90 ರನ್‌ ಗಳಿಸಿದರು. ಪಂಕಜ್‌ ಭುಯಿ 25 ಎಸೆತಗಳಲ್ಲಿ 51 ರನ್‌ ಗಳಿಸಿ ಮಿಂಚಿದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ ಒಂಬತ್ತು ವಿಕೆಟ್ ಕಳೆದುಕೊಂಡು 162 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ: 20 ಓವರ್‌ಗಲ್ಲಿ 5ಕ್ಕೆ 217 (ಅಜಯ್ ಕುಮಾರ್ ರೆಡ್ಡಿ 90, ಪಂಕಜ್‌ ಭುಯಿ 51; ಎಡ್‌ ಹೊಸೆಲ್‌ 24ಕ್ಕೆ2, ಜಸ್ಟಿನ್‌ ಹಾಲಿಂಗ್ಸ್‌ವರ್ಥ್‌ 31ಕ್ಕೆ2); ಇಂಗ್ಲೆಂಡ್‌: 20 ಓವರ್‌ಗಳಲ್ಲಿ 9ಕ್ಕೆ 162 (ಎಡ್‌ ಹೊಸೆಲ್‌ 45; ದುರ್ಗಾ ರಾವ್‌ 9ಕ್ಕೆ3). ಫಲಿತಾಂಶ: ಭಾರತಕ್ಕೆ 55 ರನ್‌ಗಳ ಜಯ. ಮುಂದಿನ ಪಂದ್ಯ: ಗುರುವಾರ ಬೆಳಿಗ್ಗೆ 10.30ಕ್ಕೆ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !