ಭಾನುವಾರ, ಮಾರ್ಚ್ 29, 2020
19 °C
ಅಂಧರ ಕ್ರಿಕೆಟ್‌: ಕರ್ನಾಟಕಕ್ಕೆ ಎರಡನೇ ಜಯ

ಮಿಂಚಿದ ಪ್ರಕಾಶ್, ಸುನಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಕಾಶ್‌ ಜಯರಾಮಯ್ಯ ಮತ್ತು ಸುನಿಲ್‌ ಅವರ ಭರ್ಜರಿ ಆಟದ ಬಲದಿಂದ ಕರ್ನಾಟಕ ತಂಡ ಇಂಡಸ್‌ಇಂಡ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ಅಂಧರ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಎಸ್‌ಜೆಸಿಇ ಮೈದಾನದಲ್ಲಿ ಮಂಗಳ ವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 63 ರನ್‌ಗಳಿಂದ ದೆಹಲಿ ತಂಡ ವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ ಪ್ರಕಾಶ್‌ (79, 43 ಎಸೆತ) ಮತ್ತು ಸುನಿಲ್ (71; 32 ಎಸೆತ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 217 ರನ್‌ ಗಳಿಸಿತು. ಎದುರಾಳಿ ತಂಡ 19.4 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ 20 ಓವರ್‌ಗಳಲ್ಲಿ 5ಕ್ಕೆ 217 (ಪ್ರಕಾಶ್ 79, ಸುನಿಲ್ 71, ನೀಲೇಶ್ 51ಕ್ಕೆ 2) ದೆಹಲಿ 19.4 ಓವರ್‌ಗಳಲ್ಲಿ 154 (ಸೌರವ್‌ ಪಾಂಡೆ 38, ಪಿಂಟು 21, ಅಭಿ 10ಕ್ಕೆ 2) ಫಲಿತಾಂಶ: ಕರ್ನಾಟಕಕ್ಕೆ 63 ರನ್‌ ಗೆಲುವು; ಪಂದ್ಯಶ್ರೇಷ್ಠ: ಪ್ರಕಾಶ್ ಜಯರಾಮಯ್ಯ

ಗೋವಾ: 20 ಓವರ್‌ಗಳಲ್ಲಿ 6ಕ್ಕೆ159 (ಅಕ್ಷಯ್ 48, ಸಾಗರ್‌ 30, ಅಜಿತ್ 24ಕ್ಕೆ 2, ಇರ್ಫಾನ್‌ 12ಕ್ಕೆ 1) ಹರಿಯಾಣ 9.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 160 (ದೀಪಕ್ 103, ವಿನೀತ್ 41) ಫಲಿತಾಂಶ: ಹರಿಯಾಣ ತಂಡಕ್ಕೆ 10 ವಿಕೆಟ್‌ ಜಯ, ಪಂದ್ಯಶ್ರೇಷ್ಠ: ದೀಪಕ್‌ ಮಲಿಕ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು