ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿರಾಟ್ ನೈತಿಕತೆಯ ‘ಬಾರ್ಡರ್‌’ ಮೀರಿಲ್ಲ’

ಭಾರತ ತಂಡದ ನಾಯಕನನ್ನು ಬೆಂಬಲಿಸಿದ ಆಸ್ಟ್ರೇಲಿಯಾದ ಹಿರಿಯ ಆಟಗಾರರು
Last Updated 21 ಡಿಸೆಂಬರ್ 2018, 6:02 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನಡವಳಿಕೆ ಬಗ್ಗೆ ಒಂದೆಡೆ ಟೀಕೆಗಳು ಹೆಚ್ಚುತ್ತಿದ್ದರೆ, ಆಸ್ಟ್ರೇಲಿಯಾದ ಹಿರಿಯ ಆಟಗಾರ ಅಲನ್ ಬಾರ್ಡರ್‌ ಅವರು ಕೊಹ್ಲಿ ಅವರನ್ನು ಬೆಂಬಲಿಸಿದ್ದಾರೆ.

ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಜೊತೆ ಕೊಹ್ಲಿ ವಾಗ್ಯುದ್ಧ ನಡೆಸಿದ್ದು ಟೀಕೆಗೆ ಕಾರಣವಾಗಿತ್ತು.

ಆಸ್ಟ್ರೇಲಿಯಾದ ಹಿರಿಯ ಬೌಲರ್ ಮಿಷೆಲ್‌ ಜಾನ್ಸನ್‌, ಭಾರತದ ಸುನಿಲ್ ಗಾವಸ್ಕರ್‌, ನಟ ನಾಸಿರುದ್ದೀನ್ ಶಾ ಮುಂತಾದವರುಕೊಹ್ಲಿ ವಿರುದ್ಧ ಕಿಡಿ ಕಾರಿದ್ದರು.

ಆದರೆ ಗುರುವಾರ ಕ್ರೀಡಾ ವೆಬ್‌ಸೈಟ್ ಒಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಬಾರ್ಡರ್‌ ‘ಕ್ರಿಕೆಟ್‌ಗೆ ಕೊಹ್ಲಿ ಅವರಂಥ ವ್ಯಕ್ತಿತ್ವಗಳು ಅಗತ್ಯ’ ಎಂದು ಹೇಳಿದ್ದಾರೆ.

‘ತಂಡದ ಬೌಲರ್ ವಿಕೆಟ್ ಉರುಳಿಸಿದಾಗ ಕೊಹ್ಲಿ ಅವರಷ್ಟು ಸಂಭ್ರಮಿಸುವ ಬೇರೊಬ್ಬ ನಾಯಕನನ್ನು ನಾನು ಕಂಡಿಲ್ಲ. ಆಟವನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಅದು ತೋರಿಸುತ್ತದೆ’ ಎಂದು ಬಾರ್ಡರ್ ನುಡಿದಿದ್ದಾರೆ.

ಲೆಹ್ಮನ್ ಮೆಚ್ಚುಗೆ: ಆಸ್ಟ್ರೇಲಿಯಾ ತಂಡದ ಕೋಚ್ ಆಗಿದ್ದ ಡರೆನ್ ಲೆಹ್ಮನ್ ಕೂಡ ಕೊಹ್ಲಿ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

‘ಕೊಹ್ಲಿಗೆ ಕ್ರಿಕೆಟ್ ಮೇಲೆ ಇರುವ ಪ್ರೀತಿ ಅಪಾರ. ಹೀಗಾಗಿ ಅವರು ಅಂಗಣದಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೊಹ್ಲಿ, ಎದುರಾಳಿಗಳ ಸವಾಲಿಗೆ ಎದೆಗುಂದುವವರಲ್ಲ. ಗೆಲುವಿನಲ್ಲಿ ಅವರು ಸಂಭ್ರಮ ಕಾಣುತ್ತಾರೆ. ಅದನ್ನು ದುರ್ವರ್ತನೆ ಎಂದು ಹೇಳಲಾಗದು’ ಎಂಬುದು ಲೆಹ್ಮನ್‌ ವ್ಯಾಖ್ಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT