ಭಾನುವಾರ, ಜೂನ್ 20, 2021
25 °C

‘ಉಭಯರಾಷ್ಟ್ರ’ ಕ್ರಿಕೆಟ್ ಆಟಗಾರ ರಂಕಿನ್ ನಿವೃತ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರೂ ಪ್ರಕಾರಗಳಲ್ಲಿ ಎರಡು ರಾಷ್ಟ್ರಗಳ ಪರವಾಗಿ ಆಡಿದ ಮೊದಲ ಕ್ರಿಕೆಟರ್ ಬಾಯ್ಡ್‌ ರಂಕಿನ್ ಅವರು ಶುಕ್ರವಾರ ನಿವೃತ್ತರಾಗಿದ್ದಾರೆ. ಅವರು ಇಂಗ್ಲೆಂಡ್ ಮತ್ತು ಐರ್ಲೆಂಡ್‌ ತಂಡದ ವೇಗದ ಬೌಲರ್ ಆಗಿದ್ದರು.

2003ರಲ್ಲಿ ಐರ್ಲೆಂಡ್ ತಂಡದ ಪರವಾಗಿ ಪದಾರ್ಪಣೆ ಪಂದ್ಯ ಆಡಿದ ಅವರು 2020ರಲ್ಲಿ ಗ್ರೇಟರ್ ನೊಯ್ಡಾದಲ್ಲಿ ನಡೆದ ಅಫ್ಗಾನಿಸ್ಥಾನ ಎದುರಿನ ಟಿ20 ಪಂದ್ಯದಲ್ಲಿ ದೇಶದ ಪರವಾಗಿ ಕೊನೆಯದಾಗಿ ಕಣಕ್ಕೆ ಇಳಿದಿದ್ದರು. ಇಂಗ್ಲೆಂಡ್ ತಂಡದಲ್ಲಿ 2013–14ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿ, ಏಳು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

2017ರಲ್ಲಿ ಐರ್ಲೆಂಡ್ ತಂಡ ಟೆಸ್ಟ್ ಮಾನ್ಯತೆ ಗಳಿಸಿದ ನಂತರ ಆ ತಂಡ ಸೇರಿಕೊಂಡರು. ಮೂರು ಟೆಸ್ಟ್, 75 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎರಡು ರಾಷ್ಟ್ರಗಳ ಟೆಸ್ಟ್ ತಂಡಗಳಲ್ಲಿ ಆಡಿದ 15 ಆಟಗಾರರಲ್ಲಿ ರಂಕಿನ್ ಒಬ್ಬರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು