ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ನಲ್ಲಿ ಆಡಲು ಸ್ಮಿತ್‌ಗೆ ಅವಕಾಶ ಇಲ್ಲ

Last Updated 20 ಡಿಸೆಂಬರ್ 2018, 19:38 IST
ಅಕ್ಷರ ಗಾತ್ರ

ಢಾಕಾ (ಎಎಫ್‌ಪಿ): ಮುಂಬರುವ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ (ಬಿಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವನ್‌ ಸ್ಮಿತ್‌ಗೆ ಅವಕಾಶ ನಿರಾಕರಿಸಲಾಗಿದೆ.

ಈ ವಿಷಯವನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಗುರುವಾರ ತಿಳಿಸಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದು ಸಾಬೀತಾದ ಕಾರಣ ಸ್ಮಿತ್‌ ಮೇಲೆ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಒಂದು ವರ್ಷ ನಿಷೇಧ ಹೇರಿದೆ. ಶೆಫಿಲ್ಡ್‌ ಶೀಲ್ಡ್‌ ಮತ್ತು ಬಿಗ್‌ಬ್ಯಾಷ್‌ ಲೀಗ್‌ಗಳಲ್ಲೂ ಕಣಕ್ಕಿಳಿಯದಂತೆ ಸೂಚಿಸಿದೆ.

ಬಿಪಿಎಲ್‌ನಲ್ಲಿ ಆಡುವ ಕೊಮಿಲ್ಲಾ ವಿಕ್ಟೋರಿಯನ್ಸ್‌ ತಂಡ ಇತ್ತೀಚೆಗೆ ಸ್ಮಿತ್‌ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅವರು ಮುಂದಿನ ತಿಂಗಳು ತಂಡ ಸೇರಿಕೊಳ್ಳಬೇಕಿತ್ತು.

‘ಆಟಗಾರನ ಹೆಸರು ಹರಾಜು ಪಟ್ಟಿಯಲ್ಲಿ ಇದ್ದರೆ ಮಾತ್ರ ಆತನನ್ನು ಬದಲಿ ಆಟಗಾರನ ರೂಪದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಸ್ಮಿತ್‌ ಹೆಸರು ಹರಾಜು ಪಟ್ಟಿಯಲ್ಲಿಲ್ಲ. ಹೀಗಾಗಿ ಇತರೆ ಫ್ರಾಂಚೈಸ್‌ಗಳು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿವೆ. ಆದ್ದರಿಂದ ನಾವು ಸ್ಮಿತ್‌ಗೆ ಅವಕಾಶ ನಿರಾಕರಿಸಿದ್ದೇವೆ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ನಿಜಾಮುದ್ದೀನ್‌ ಚೌಧರಿ ತಿಳಿಸಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಡೇವಿಡ್‌ ವಾರ್ನರ್‌ ಅವರು ಜನವರಿ 5ರಿಂದ ಫೆಬ್ರುವರಿ 8ರ ವರೆಗೆ ನಡೆಯುವ ಲೀಗ್‌ನಲ್ಲಿ ಸಿಲೆಟ್‌ ಸಿಕ್ಸರ್‌ ಪರ ಕಣಕ್ಕಿಳಿಯಲಿದ್ದಾರೆ.

ನಿಷೇಧದ ನಂತರ ಸ್ಮಿತ್‌ ಅವರು ಕೆನಡಾ ಗ್ಲೋಬಲ್‌ ಟ್ವೆಂಟಿ–20 ಮತ್ತು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಿದ್ದರು. ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲೂ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT