ಗುರುವಾರ , ಅಕ್ಟೋಬರ್ 17, 2019
22 °C

ಬ್ರಾಥ್‌ವೇಟ್‌ ಬೌಲಿಂಗ್‌ಗೆ ಅನುಮತಿ

Published:
Updated:

ದುಬೈ : ವೆಸ್ಟ್ ಇಂಡೀಸ್‌ ಸ್ಪಿನ್ನರ್‌ ಕ್ರೆಗ್‌ ಬ್ರಾಥ್‌ವೇಟ್‌ ಬೌಲಿಂಗ್‌ ಶೈಲಿ ನಿಯಮಬದ್ಧವಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಬೌಲಿಂಗ್‌ ಮಾಡಲು ಐಸಿಸಿ ಅವರಿಗೆ ಅನುಮತಿ ನೀಡಿದೆ.

ಆಫ್‌ ಸ್ಪಿನ್‌ ಬೌಲಿಂಗ್‌ ಮಾಡುವ ಈ ಕೆರಿಬಿಯನ್‌ ಆಟಗಾರ, ಕಿಂಗ್‌ಸ್ಟನ್‌ನಲ್ಲಿ ಸೆಪ್ಟೆಂಬರ್‌ 2ರಂದು ಮುಕ್ತಾಯಗೊಂಡ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶಂಕಾಸ್ಪದ ರೀತಿಯಲ್ಲಿ ಬೌಲಿಂಗ್‌ ಮಾಡಿದ ವರದಿಯಾಗಿತ್ತು.

ಬ್ರಾಥ್‌ವೇಟ್‌ ಬೌಲಿಂಗ್‌ ಅನ್ನು ಸೆಪ್ಟೆಂಬರ್‌ 14ರಂದು ಇಂಗ್ಲೆಂಡ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಆ ವೇಳೆ ಅವರ ಬೌಲಿಂಗ್‌ ಐಸಿಸಿ  ನಿಯಮಗಳನ್ವಯ ಸೂಕ್ತವಾಗಿದೆ ಎಂದು ತಿಳಿದುಬಂದಿತ್ತು.

 

 

Post Comments (+)