ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಿಸ್ತಿಗೆ ದಂಡ ತೆತ್ತ ಕಾರ್ಲೋಸ್ ಬ್ರಾಥ್‌ವೇಟ್

Last Updated 28 ಜೂನ್ 2019, 19:45 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್ (ಪಿಟಿಐ): ಭಾರತದ ಎದುರಿನ ಪಂದ್ಯದಲ್ಲಿ ಅನುಚಿತವಾಗಿ ವರ್ತಿಸಿದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೇಟ್ ಅವರಿಗೆ ಪಂದ್ಯದ ರೆಫರಿ ದಂಡ ವಿಧಿಸಿದ್ದಾರೆ. ಪಂದ್ಯದ ಸಂಭಾವನೆಯ ಶೇಕಡಾ 15 ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಗುರುವಾರ ನಡೆದಿದ್ದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ 125 ರನ್‌ಗಳಿಂದ ಮಣಿಸಿತ್ತು. ಭಾರತ ನೀಡಿದ 269 ರನ್‌ಗಳ ಗುರಿಯನ್ನು ಬೆನ್ನತ್ತಿದ ವಿಂಡೀಸ್ 34.2 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟಾಗಿತ್ತು. ಭಾರತದ ಇನಿಂಗ್ಸ್‌ನ 42ನೇ ಓವರ್‌ನಲ್ಲಿ ವೈಡ್ ಎಸೆತ ಹಾಕಿದ ಬ್ರಾಥ್‌ವೇಟ್ ಅಂಪೈರ್ ನಿರ್ಧಾರವನ್ನು ವಿರೋಧಿಸಿದ್ದರು.

ಬ್ರಾಥ್‌ವೇಟ್‌ ಐಸಿಸಿ ನೀತಿಯ 2.8ನೇ ವಿಧಿಯನ್ನು ಉಲ್ಲಂಘಿಸಿದ್ದು ದಂಡದೊಂದಿಗೆ ಶಿಸ್ತು ದಾಖಲೆಯಲ್ಲಿ ಒಂದು ಪಾಯಿಂಟ್‌ ಕಳೆಯಲಾಗಿದೆ ಎಂದು ಐಸಿಸಿ ತಿಳಿಸಿದೆ. 2016ರಲ್ಲಿ ಐಸಿಸಿ ನಿಯಮಾವಳಿಗೆ ತಿದ್ದುಪಡಿ ತಂದ ನಂತರ ಬ್ರಾಥ್‌ವೇಟ್ ಒಟ್ಟಾರೆ ಎರಡು ಪಾಯಿಂಟ್ ಕಳೆದುಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT