ಕ್ರಿಕೆಟ್‌: ಲಿಲಿ ರೋಸ್‌ ಶಾಲೆಗೆ ಜಯ

7

ಕ್ರಿಕೆಟ್‌: ಲಿಲಿ ರೋಸ್‌ ಶಾಲೆಗೆ ಜಯ

Published:
Updated:

ಬೆಂಗಳೂರು: ಫರ್ದೀನ್‌ (14ಕ್ಕೆ4) ಮತ್ತು ಸೈಯದ್‌ ಕೈಫ್‌ (9ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಲಿಲಿ ರೋಸ್ ಶಾಲೆ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್–3ರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಹಿಮಾಂಶು ಜ್ಯೋತಿ ಕಲಾ ಪೀಠ ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಹಿಮಾಂಶು ಜ್ಯೋತಿ ಕಲಾ ಪೀಠ: 16.3 ಓವರ್‌ಗಳಲ್ಲಿ 73 (ಫರ್ದೀನ್‌ 14ಕ್ಕೆ4, ಸೈಯದ್‌ ಕೈಫ್‌ 9ಕ್ಕೆ2). ಲಿಲಿ ರೋಸ್‌ ಶಾಲೆ: 9.1 ಓವರ್‌ಗಳಲ್ಲಿ 4 ವಿಕೆಟ್‌ಗೆ 76. ಫಲಿತಾಂಶ: ಲಿಲಿ ರೋಸ್‌ ಶಾಲೆಗೆ 6 ವಿಕೆಟ್‌ ಜಯ.

ಹೋಲಿ ಕ್ರಾಸ್‌ ಶಾಲೆ, ವೈಟ್‌ಫೀಲ್ಡ್‌: 30 ಓವರ್‌ಗಳಲ್ಲಿ 6 ವಿಕೆಟ್‌ಗೆ 131 (ಮಿಥುನ್‌ 17ಕ್ಕೆ3). ಕೇಂಬ್ರಿಜ್‌ ಪಬ್ಲಿಕ್‌ ಶಾಲೆ: 28 ಓವರ್‌ಗಳಲ್ಲಿ 8 ವಿಕೆಟ್‌ಗೆ 132 (ಎಸ್‌.ವಿ.ಸುಮುಖ್‌ 39ಕ್ಕೆ3, ವಿ.ಶ್ರೀವತ್ಸ 7ಕ್ಕೆ2). ಫಲಿತಾಂಶ: ಕೇಂಬ್ರಿಜ್‌ ಶಾಲೆಗೆ 2 ವಿಕೆಟ್‌ ಗೆಲುವು.

ಆರ್ಮಿ ಪಬ್ಲಿಕ್‌ ಶಾಲೆ, ಎಎಸ್‌ಸಿ ಸೆಂಟರ್‌: 30 ಓವರ್‌ಗಳಲ್ಲಿ 4 ವಿಕೆಟ್‌ಗೆ 198 (ಸಾಯಿರಾಜ್‌ ಡಿ ಕಿಲ್ಲೇದಾರ್‌ 106, ಪ್ರಣವ್ ಭಾರದ್ವಾಜ್‌ 51). ನ್ಯಾಷನಲ್‌ ಪಬ್ಲಿಕ್‌ ಶಾಲೆ ಬಿ–8: 23.5 ಓವರ್‌ಗಳಲ್ಲಿ 92. ಫಲಿತಾಂಶ: ಆರ್ಮಿ ಪಬ್ಲಿಕ್‌ ಶಾಲೆಗೆ 106ರನ್‌ ಜಯ.

ಹೋಲಿ ಏಂಜಲ್ಸ್‌ ಪ್ರೌಢಶಾಲೆ: 27.1 ಓವರ್‌ಗಳಲ್ಲಿ 103 (ಕಾರ್ತಿಕ್‌ 4ಕ್ಕೆ3). ಸೌಂದರ್ಯ ಸೆಂಟ್ರಲ್‌ ಶಾಲೆ: 24.2 ಓವರ್‌ಗಳಲ್ಲಿ 6 ವಿಕೆಟ್‌ಗೆ 106. ಫಲಿತಾಂಶ: ಸೌಂದರ್ಯ ಶಾಲೆಗೆ 4 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !