ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಒಂದೂ ವಿಕೆಟ್ ತೆಗೆದುಕೊಂಡಿಲ್ಲ. ಇದರಿಂದಾಗಿ ಪವರ್ ಪ್ಲೇ ಮತ್ತು ಕೊನೆಯ ಹಂತದ ಓವರ್ಗಳಲ್ಲಿ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ಗುರುವಾರ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಬೂಮ್ರಾ ನಾಲ್ಕು ಓವರ್ಗಳಲ್ಲಿ 41 ರನ್ ಕೊಟ್ಟರು. 196 ರನ್ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ತಂಡವು 7 ವಿಕೆಟ್ಗಳಿಂದ ಜಯಿಸಿತು. ಮುಂಬೈ ಸತತ ನಾಲ್ಕನೆ ಪಂದ್ಯ ಸೋತಿತು.

ಪಂದ್ಯದ ನಂತರ ಮಾತನಾಡಿದ ಮುಂಬೈ ಕೋಚ್ ಮಹೇಲಾ ಜಯವರ್ಧನೆ, ‘ಬೂಮ್ರಾ ಅವರು ಚೆನ್ನಾಗಿಯೇ ಎಸೆತಗಳನ್ನು ಹಾಕುತ್ತಿದ್ದಾರೆ. ಎದುರಾಳಿಗಳೂ ಎಚ್ಚರಿಕೆಯಿಂದ ಆಡುತ್ತಿದ್ದಾರೆ. ಬೂಮ್ರಾ ಓವರ್ನಲ್ಲಿ ಆಡಲೇಬೇಕೆಂಬ ಒತ್ತಡಕ್ಕೆ ಒಳಗಾಗುತ್ತಿಲ್ಲ. ಕೆಲವು ವಿಭಿನ್ನ ತಂತ್ರಗಳನ್ನು ಬೂಮ್ರಾ ತಮ್ಮ ಬೌಲಿಂಗ್ನಲ್ಲಿ ಮಾಡಿದರು. ಆದರೂ ಫಲ ನೀಡಲಿಲ್ಲ’ ಎಂದರು.

‘ಟೂರ್ನಿಯ ಆರಂಭದ ಹೊತ್ತಿನಲ್ಲಿ ಬೂಮ್ರಾ ಅವರ ಸ್ನಾಯುವಿನಲ್ಲಿ ಸಣ್ಣಪ್ರಮಾಣದ ನೋವಿತ್ತು. ಆದರೂ ಅವರು ಉತ್ತಮ ದಾಳಿಯನ್ನೇ ಸಂಘಟಿಸಿದ್ದಾರೆ. ಅದರಲ್ಲೂ ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಅವರಿಗೆ ಕೆಲವು ಉತ್ತಮ ಎಸೆತಗಳನ್ನೂ ಪ್ರಯೋಗಿಸಿದ್ದರು. ಆದರೆ ಬೂಮ್ರಾಗೆ ಅದೃಷ್ಟ ಜೊತೆಗೂಡಲಿಲ್ಲ. ಒಂದು ಬಾರಿ ಬೂಮ್ರಾ ವಿಕೆಟ್ ಪಡೆಯಲು ಶುರು ಮಾಡಿದರೆ ನಂತರ ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.