ದೋನಿಗಿಂತ ಬಟ್ಲರ್‌ ಉತ್ತಮ ಬ್ಯಾಟ್ಸ್‌ಮನ್‌: ಟಿಮ್‌ ಪೇನ್‌

7

ದೋನಿಗಿಂತ ಬಟ್ಲರ್‌ ಉತ್ತಮ ಬ್ಯಾಟ್ಸ್‌ಮನ್‌: ಟಿಮ್‌ ಪೇನ್‌

Published:
Updated:
ಜೋಸ್‌ ಬಟ್ಲರ್‌

ಮ್ಯಾಂಚೆಸ್ಟರ್‌ : ‘ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌ ಏಕದಿನ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್‌ ದೋನಿಗಿಂತ ಉತ್ತಮ ಬ್ಯಾಟ್ಸ್‌ಮನ್‌’ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್‌ ಹೇಳಿದ್ದಾರೆ. 

‘ಸದ್ಯ ಆಡುತ್ತಿರುವ ವಿಕೆಟ್‌ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತ ತಂಡದ ದೋನಿ ಉತ್ತಮ ಸಾಮರ್ಥ್ಯ ತೋರಬಲ್ಲರು. ಆದರೆ, ಬಟ್ಲರ್‌ ಅವರು ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಅಪೂರ್ವ ಸಾಮರ್ಥ್ಯ ಎಲ್ಲರ
ಹುಬ್ಬೇರಿಸುವಂತಿದೆ’ ಎಂದು ಅವರು ಹೇಳಿದ್ದಾರೆ. 

‘ಬಟ್ಲರ್‌ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆಡುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡಿರುವ ಅವರು ತಮ್ಮ ಸಾಮರ್ಥ್ಯ ಮೀರಿ ಎದುರಾಳಿಗೆ ಸವಾಲಾಗಬಲ್ಲರು’ ಎಂದು ಅವರು ತಿಳಿಸಿದ್ದಾರೆ. 

‘ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಜೋಸ್‌ ಅವರಿಂದ ಅನೇಕ ವಿಷಯಗಳನ್ನು ಕಲಿತುಕೊಳ್ಳಬಹುದು. ಇದರಿಂದ ನಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಇನ್ನಷ್ಟು ಉತ್ತಮಪಡಿಸಿಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಭಾನುವಾರ ಮುಗಿದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಬಟ್ಲರ್‌ ಒಟ್ಟು 275 ರನ್‌ಗಳನ್ನು ಗಳಿಸಿದ್ದರು. ಈ ಸರಣಿಯ ಐದು ಪಂದ್ಯಗಳಲ್ಲಿ ಗೆದ್ದು ಇಂಗ್ಲೆಂಡ್‌ ತಂಡವು ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಇಂಗ್ಲೆಂಡ್‌ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೋಸ್‌ ಅವರು ಮೂರು ಪಂದ್ಯಗಳಲ್ಲಿ ಔಟಾಗದೆ 91, 54 ಹಾಗೂ 110 ರನ್‌ಗಳನ್ನು
ಗಳಿಸಿದ್ದರು. 

ಇತ್ತೀಚೆಗೆ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಕೂಡ 548 ರನ್‌ ಗಳಿಸಿದ್ದ ಬಟ್ಲರ್‌ ಅಮೋಘ ಸಾಧನೆ ತೋರಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !