ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಟೈ ಪಂದ್ಯದಲ್ಲಿ ಒಡಿಶಾ

Published : 17 ಸೆಪ್ಟೆಂಬರ್ 2024, 19:38 IST
Last Updated : 17 ಸೆಪ್ಟೆಂಬರ್ 2024, 19:38 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ನಡೆದ ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಡಾ. ಡಿ.ವೈ. ಪಾಟೀಲ ಕ್ರಿಕೆಟ್‌ ಅಕಾಡೆಮಿ ಹಾಗೂ ಒಡಿಶಾ ಕ್ರಿಕೆಟ್‌ ಸಂಸ್ಥೆ ನಡುವಿನ ಪಂದ್ಯವು ಮಂಗಳವಾರ ಟೈ ಆಯಿತು. 

ಎರಡನೇ ಇನಿಂಗ್ಸ್‌ನಲ್ಲಿ ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿಯು ನೀಡಿದ್ದ 288 ರನ್‌ಗಳ ಜಯದ ಗುರಿಯನ್ನು ಬೆನ್ನು ಹತ್ತಿದ ಒಡಿಶಾ ಕ್ರಿಕೆಟ್‌ ಸಂಸ್ಥೆ 287ಕ್ಕೆ ಆಲೌಟ್‌ ಆಗುವ ಮೂಲಕ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಪಂದ್ಯದ 89ನೇ ಓವರ್‌ನ ಮೊದಲ ಎಸೆತದಲ್ಲೇ ಪಾರ್ಥ್‌ ಸಹಾನಿ ಅವರು ಸುನಿಲ್‌ ರೌಲ್‌ ಅವರನ್ನು ಬೌಲ್ಡ್‌ ಮಾಡಿದರು. ಇದರೊಂದಿಗೆ ಪಂದ್ಯ ಟೈ ಆಯಿತು.  

ಸಂಕ್ಷಿಪ್ತ ಸ್ಕೋರ್‌:


ಮೊದಲ ಇನಿಂಗ್ಸ್‌: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 53.3 ಓವರ್‌ಗಳಲ್ಲಿ 262; ಒಡಿಶಾ ಕ್ರಿಕೆಟ್‌ ಸಂಸ್ಥೆ: 86.1 ಓವರ್‌ಗಳಲ್ಲಿ 283;

ಎರಡನೇ ಇನಿಂಗ್ಸ್: ಪಾಟೀಲ ಅಕಾಡೆಮಿ: 87.2 ಓವರ್‌ಗಳಲ್ಲಿ 308; ಒಡಿಶಾ ಕ್ರಿಕೆಟ್ ಸಂಸ್ಥೆ: 88.1 ಓವರ್‌ಗಳಲ್ಲಿ 287 (ಶಂತನು ಮಿಶ್ರ 44, ಕಾರ್ತಿಕ್‌ ಬಿಸ್ವಾಲ್‌ 90. ಕರ್ಶ್‌ ಕೊಠಾರಿ 82ಕ್ಕೆ 4, ಉಮರ್ ಖಾನ್‌ 86ಕ್ಕೆ 4) ಫಲಿತಾಂಶ : ಪಂದ್ಯ ಟೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT