ಮೈಸೂರು: ಬರೋಡಾ ಕ್ರಿಕೆಟ್ ಸಂಸ್ಥೆಯ ಭಾರ್ಗವ್ ಭಟ್ ( 64ಕ್ಕೆ 6) ಸ್ಪಿನ್ ಎದುರು ಕೆಎಸ್‌ಸಿಎ ಕೋಲ್ಟ್ಸ್ ತಂಡವು ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯಿತು.
ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಎಸ್‌ಸಿ ಕೋಲ್ಟ್ಸ್ 202ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ದಿನದಾಟದ ಅಂತ್ಯಕ್ಕೆ ಬರೋಡಾ ಕ್ರಿಕೆಟ್ ಸಂಸ್ಥೆ 1 ವಿಕೆಟ್‌ಗೆ 93 ರನ್ ಗಳಿಸಿತು.
ಕೋಲ್ಟ್ಸ್ ಪರ ಆರಂಭಿಕರಾದ ಎಸ್.ಯು. ಕಾರ್ತಿಕ್ (20) ಹಾಗೂ ಎಂ.ಬಿ. ಶಿವಂ (22) ಮೊದಲ ವಿಕೆಟ್‌ಗೆ 46 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹರ್ಷಿಲ್ ( 58; 58ಎ, 4X9, 6X1) ಅರ್ಧಶತಕದ ಕಾಣಿಕೆ ನೀಡಿದರು. ಆದರೆ ಮಧ್ಯಮ ಹಾಗೂ ಕೆಳಕ್ರಮಾಂಕದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಒಡಿಶಾಗೆ ಸಂಕಷ್ಟ: ಎಸ್‌ಜೆಸಿಇ ಮೈದಾನದಲ್ಲಿ ಆರಂಭಗೊಂಡ ಇನ್ನೊಂದು ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿಯು 262 ರನ್‌ಗಳಿಗೆ ಆಲೌಟ್ ಅಯಿತು. ಇದಕ್ಕುತ್ತರವಾಗಿ ಒಡಿಶಾ ತಂಡವು 88 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಸಂಕ್ಷಿಪ್ತ ಸ್ಕೋರ್
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಮೊದಲ ಇನಿಂಗ್ಸ್
ಕೆಎಸ್‌ಸಿಎ ಕೋಲ್ಟ್ಸ್: 62.3 ಓವರ್‌ಗಳಲ್ಲಿ 202 (ಎಸ್.ಯು. ಕಾರ್ತಿಕ್ 20, ಎಂ.ಬಿ. ಶಿವಂ 22, ಹರ್ಷಿಲ್ 58. ಪಿ. ಧ್ರುವ್ 29. ಭಾರ್ಗವ್ ಭಟ್ 64ಕ್ಕೆ 6, ಅಭಿಮನ್ಯು ಸಿಂಗ್ 52ಕ್ಕೆ 2).
ಬರೋಡಾ ಕ್ರಿಕೆಟ್ ಸಂಸ್ಥೆ: 27 ಓವರ್‌ಗಳಲ್ಲಿ 1 ವಿಕೆಟ್‌ಗೆ 93 ( ಕಿನಿತ್ ಪಟೇಲ್ ಔಟಾಗದೆ 50, ಪ್ರಿಯಾಂಶು 28, ಧೀರಜ್ ಗೌಡ 13ಕ್ಕೆ 1)
ಎಸ್‌ಜೆಸಿಇ ಕ್ರೀಡಾಂಗಣ
ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 53.3 ಓವರ್‌ಗಳಲ್ಲಿ 262 (ಆಯುಷ್ ಬದೊನಿ 72, ಪಾರ್ಥ್ ಸಹಾನಿ 71. ಸುನಿಲ್ ರೌಲ್ 62ಕ್ಕೆ 3, ತಪಸ್ ದಾಸ್ 56ಕ್ಕೆ 4).
ಒಡಿಶಾ ಕ್ರಿಕೆಟ್ ಸಂಸ್ಥೆ: 22 ಓವರ್‌ಗಳಲ್ಲಿ 5 ವಿಕೆಟ್‌ಗೆ 88 (ವಿಶ್ವಭೂಷಣ್ 26, ಕೆ. ಸಂದೀಪ್ ಔಟಾಗದೆ 46)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.