ಅಹಮದಾಬಾದ್ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಅವರು ಟೀಕಿಸಿದ್ದಾರೆ. ‘ ಈ ನಿಯಮದಿಂದ ಆಟದಲ್ಲಿ ಕೌಶಲ ಕುಂಠಿತವಾಗುತ್ತಿದೆ’ ಎಂದಿದ್ದಾರೆ.

ಈ ನಿಯಮದ ಕುರಿತು ಈಗಾಗಲೇ ಐಪಿಎಲ್ ಟೂರ್ನಿಯ ಕೆಲವು ತಂಡಗಳ ನಾಯಕರು ಮತ್ತು ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಅನುಭವಿ ಆಟಗಾರ ರೋಹಿತ್ ಶರ್ಮಾ ಅವರು ಟೀಕಿಸಿದ್ದರು. ಅವರ ಸಾಲಿಗೆ ಈಗ ಗಿಲ್ ಕೂಡ ಸೇರಿದ್ದಾರೆ.

‘ಇಂಪ್ಯಾಕ್ಟ್ ಪ್ಲೇಯರ್ ಇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕ್ರಿಕೆಟ್ ಸಾಮಾನ್ಯವಾಗಿ 11 ಆಟಗಾರರಿರುವ ತಂಡದ ಆಟವಾಗಿದೆ. ಆ ಸಾಮರ್ಥ್ಯದೊಂದಿಗೆ ನಾವು ಮೈದಾನದಲ್ಲಿ ಆಡುತ್ತೇವೆ. ಆದರೆ ಹೆಚ್ಚುವರಿ ಬ್ಯಾಟರ್ ನಿಯೋಜಿಸುವ ಈ ನಿಯಮದಿಂದಾಗಿ ಕೌಶಲಗಳು ನಷ್ಟವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಒಬ್ಬ ಹೆಚ್ಚುವರಿ ಆಟಗಾರನಿಂದಾಗಿ ಪಂದ್ಯವು ಒಂದೇ ಕಡೆ ವಾಲುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪಿಚ್ ಮೇಲೆ 180 ರನ್ ಮೊತ್ತವನ್ನು ಬೆನ್ನಟ್ಟುವುದು ಹೆಚ್ಚು ರೋಚಕವಾಗಿರುತ್ತದೆ. ಆದರೆ ಸಪಾಟಾದ ವಿಕೆಟ್ ಮೇಲೆ 220 ರನ್ ಬೆನ್ನಟ್ಟುವುದು ಅಷ್ಟೇನೂ ಆಸಕ್ತಿದಾಯಕವಲ್ಲ’ ಎಂದು ಸುದ್ದಿಗಾರರಿಗೆ ಹೇಳಿದರು.

‘2027ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ನಿನ್ನೆ (ಬುಧವಾರ) ನಾಯಕರ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಿದ್ದೆವು. ಈ ನಿಯಮದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಬಿಸಿಸಿಐಗೆ ಬಿಟ್ಟಿದ್ದು. ಆದರೆ ವೈಯಕ್ತಿಕವಾಗಿ ನನಗೆ ಇದು ಇಷ್ಟವಿಲ್ಲದ ನಿಯಮ’ ಎಂದು ಗಿಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.