ನಾರ್ಥಂಪ್ಟನ್ ಶೈರ್: ಭಾರತದ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಇಂಗ್ಲಿಷ್ ಕೌಂಟಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದರು. ನಾರ್ಥಂಪ್ಟನ್ ಶೈರ್ ತಂಡದಲ್ಲಿ ಆಡುತ್ತಿರುವ ಚಾಹಲ್ ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಈ ಸಾಧನೆ ಮಾಡಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ನಾರ್ಥಂಪ್ಟನ್ ತಂಡವು 9 ವಿಕೆಟ್‌ಗಳಿಂದ ಲೀಸ್ಟರ್‌ಶೈರ್ ವಿರುದ್ಧ ಜಯಿಸಿತು.
ಲೀಸ್ಟರ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 203 ರನ್ ಗಳಿಸಿತ್ತು. ಆ ಇನಿಂಗ್ಸ್‌ನಲ್ಲಿಯೂ ಚಾಹಲ್ ನಾಲ್ಕು ವಿಕೆಟ್ ಕಬಳಿಸಿದ್ದರು. ಅದಕ್ಕುತ್ತರವಾಗಿ ನಾರ್ಥಂಪ್ಟನ್ ತಂಡವು 383 ಗಳಿಸಿ 180 ರನ್‌ಗಳ ಮುನ್ನಡೆ ಸಾಧಿಸಿತು. ಜೇಮ್ಸ್ ಸೇಲ್ಸ್ ಶತಕ (135 ರನ್) ಗಳಿಸಿದರು.
ಎರಡನೇ ಇನಿಂಗ್ಸ್‌ನಲ್ಲಿ ಲೀಸ್ಟರ್ ತಂಡವು 316 ಗಳಿಸಿತು. ಚಾಹಲ್ ಐದು ವಿಕೆಟ್ ಗಳಿಸಿದರು. ಇದರಿಂದಾಗಿ 137 ರನ್‌ಗಳ ಗೆಲುವಿನ ಗುರಿಯನ್ನು ನಾರ್ಥಂಪ್ಟನ್‌ಗೆ ನೀಡಿತು. ತಂಡವು 30.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.