ಶುಕ್ರವಾರ, ಜನವರಿ 24, 2020
20 °C

ಚಾಲೆಂಜರ್ಸ್‌ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ತೇಜಲ್‌ ಅಕಾಡೆಮಿ ರನ್ನರ್ಸ್‌ ಅಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಪಡುಕೋಣೆ ಹಾಗೂ ದ್ರಾವಿಡ್ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 12 ವರ್ಷದ ಒಳಗಿನವರ ಚಾಲೆಂಜರ್ಸ್‌ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ನಗರದ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ರನ್ನರ್ಸ್‌ ಅಪ್‌ ಸ್ಥಾನ ಪಡೆದುಕೊಂಡಿದೆ.

ಟೂರ್ನಿಯಲ್ಲಿ ಬೆಂಗಳೂರಿನ ಆರು, ಮುಂಬೈ ಮತ್ತು ಹುಬ್ಬಳ್ಳಿಯ ತಲಾ ಒಂದು ತಂಡಗಳು ಪಾಲ್ಗೊಂಡಿದ್ದವು. ಮಹತ್ವದ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡಿದ ತೇಜಲ್‌ ಅಕಾಡೆಮಿ ಮೂರೂ ಲೀಗ್‌ ಪಂದ್ಯಗಳಲ್ಲಿ ಗೆಲುವು ಪಡೆದು ಸೆಮಿಫೈನಲ್‌ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಮುಂಬೈ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿ ಬೆಂಗಳೂರಿನ ಸಿಕ್ಸ್‌ ತಂಡದ ಎದುರು 32 ರನ್‌ಗಳಿಂದ ಸೋತು ಎರಡನೇ ಸ್ಥಾನ ಗಳಿಸಿತು.

ತೇಜಲ್‌ ತಂಡದ ಆದಿತ್ಯ ಡಂಗನವರ, ಸಾಯಿನಾಥ ರಾಜೌಳಿ, ರೆಹಾನ್ ಮೊಹಮ್ಮದ್ ಉತ್ತಮ ಪ್ರದರ್ಶನ ನೀಡಿ ವೈಯಕ್ತಿಕ ಪ್ರಶಸ್ತಿಗೂ ಭಾಜನರಾದರು. ಹಿರಿಯ ಕ್ರಿಕೆಟಿಗ ಸೋಮಶೇಖರ ಶಿರಗುಪ್ಪಿ, ಕೋಚ್‌ಗಳಾದ ದಯಾನಂದ ಶೆಟ್ಟಿ, ವೇಮರೆಡ್ಡಿ ಪಾಟೀಲ, ಕೃಷ್ಣ ರಾಯರೆಡ್ಡಿ, ಮಹೇಶಗೌಡ, ವಸಂತ ಕುಡೇದ ಮತ್ತು ಎಲ್‌. ವಿನಯ ಆಟಗಾರರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು