ಬುಧವಾರ, ನವೆಂಬರ್ 20, 2019
22 °C

ಚಾಲೆಂಜರ್ಸ್‌ ಟ್ರೋಫಿ: ಭಾರತ ಸಿ ತಂಡಕ್ಕೆ ಶುಭಾಂಗ್ ನಾಯಕ

Published:
Updated:
Prajavani

ನವದೆಹಲಿ: ಕರ್ನಾಟಕದ ಎಡಗೈ ಆಲ್‌ರೌಂಡರ್ ಶುಭಾಂಗ್ ಹೆಗ್ಡೆ ಅವರನ್ನು 19 ವರ್ಷದೊಳಗಿನವರ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ಸಿ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ನವೆಂಬರ್ 11ರಿಂದ ಹೈದರಾಬಾದ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ಎ, ಬಿ ಮತ್ತು ಸಿ ತಂಡಗಳು ಆಡಲಿವೆ. ನೇಪಾಳ ‘ಎ’ ಕೂಡ ಸ್ಪರ್ಧಿಸಲಿದೆ.  ಶುಕ್ರವಾರ ನಡೆದ ರಾಷ್ಟ್ರೀಯ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯ ಸಭೆಯಲ್ಲಿ ಎ.ಬಿ ಮತ್ತು ಸಿ ತಂಡಗಳನ್ನು ಪ್ರಕಟಿಸಲಾಯಿತು. ಸಿ ತಂಡದಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ ಸ್ಥಾನ ಪಡೆದಿದ್ದಾರೆ. ಹಿರಿಯ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್ ಅವರು ಈ ತಂಡಕ್ಕೆ ಕೋಚ್ ಆಗಿದ್ಧಾರೆ.

ವಿಕೆಟ್‌ಕೀಪರ್ ಧ್ರುವ ಚಾಂದ್ ಜುರೇಲ್ ಮತ್ತು ಪ್ರಿಯಂ ಗಾರ್ಗ್ ಅವರು ಕ್ರಮವಾಗಿ ಎ ಮತ್ತು ಬಿ ತಂಡಗಳ ನಾಯಕತ್ವ ವಹಿಸುವರು.

ಪ್ರತಿಕ್ರಿಯಿಸಿ (+)