ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ನೋವಾ ತಂಡಕ್ಕೆ ಚಾಮರಿ ಅಟ್ಟಪಟ್ಟು ಆಸರೆ

ಮೊದಲ ವಿಕೆಟ್‌ಗೆ 89 ರನ್‌ಗಳ ಜೊತೆಯಾಟ ಆಡಿದ ಪ್ರಿಯಾ ಪೂನಿಯಾ; ಕೌರ್ ಮಿಂಚಿನ ಬ್ಯಾಟಿಂಗ್
Last Updated 7 ನವೆಂಬರ್ 2020, 17:19 IST
ಅಕ್ಷರ ಗಾತ್ರ

ಶಾರ್ಜಾ (ಪಿಟಿಐ): ಶ್ರೀಲಂಕಾದ ಚಾಮರಿ ಅಟ್ಟಪಟ್ಟು ಜಯಂಗಾನಿ ಮತ್ತು ಭಾರತದ ಪ್ರಿಯಾ ಪೂನಿಯಾ ಅವರ ಅಮೋಘ ಆರಂಭಿಕ ಜೊತೆಯಾಟದ ನೆರವಿನಿಂದಸೂಪರ್‌ನೋವಾ ತಂಡವು ಐಪಿಎಲ್‌ ಅಂಗವಾಗಿ ನಡೆಯುತ್ತಿರುವ ಮಹಿಳೆಯರ ಟಿ20 ಚಾಲೆಂಜ್‌ ಟೂರ್ನಿಯ ಟ್ರೇಲ್‌ಬ್ಲೇಜರ್ ಎದುರಿನ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.

ಶನಿವಾರದ ಪಂದ್ಯದಲ್ಲಿ ಚಾಮರಿ (67; 48 ಎಸೆತ, 5 ಬೌಂಡರಿ, 4 ಸಿಕ್ಸರ್‌) ಅವರ ಅರ್ಧಶತಕ ಮತ್ತು ಪ್ರಿಯಾ ಪೂನಿಯಾ (30; 37 ಎ, 3 ಬೌಂ) ಅವರ ತಾಳ್ಮೆಯ ಆಟದ ಬಲದಿಂದ ತಂಡ 6 ವಿಕೆಟ್ ಕಳೆದುಕೊಂಡು 146 ರನ್ ಕಲೆ ಹಾಕಿತು.

ಮೊದಲ ಪಂದ್ಯದಲ್ಲಿ ಸೋತಿದ್ದ ಹಾಲಿ ಚಾಂಪಿಯನ್ ಸೂಪರ್‌ನೋವಾಗೆ ಫೈನಲ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಂಡದ ಯೋಜನೆಗೆ ತಕ್ಕಂತೆ ಅರಂಭಿಕ ಜೋಡಿ ಆಡಿತು. ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಮತ್ತು ಸ್ಪಿನ್ನರ್‌ ದೀಪ್ತಿ ಶರ್ಮಾ ಅವರನ್ನು ‌‌ಚಾಮರಿ–ಪ್ರಿಯಾ ಜೋಡಿ ಆರಂಭದಲ್ಲೇ ದಂಡಿಸಿತು. ಕಳೆದ ಪಂದ್ಯದಲ್ಲಿ ಮಿಂಚಿದ ಎಡಗೈ ಸ್ಪಿನ್ನರ್‌ಗಳಾದ ಸೋಫಿ ಎಕ್ಲೆಸ್ಟೋನ್ ಮತ್ತು ರಾಜೇಶ್ವರಿ ಗಾಯಕವಾಡ್ ಅವರನ್ನೂ ದಿಟ್ಟವಾಗಿ
ಎದುರಿಸಿದರು.

12 ಓವರ್‌ಗಳ ವರೆಗೆ ಕ್ರೀಸ್‌ನಲ್ಲಿದ್ದ ಪ್ರಿಯಾ ಮೊದಲ ವಿಕೆಟ್‌ಗೆ 89 ರನ್ ಸೇರಿಸಿದರು. ಸಲ್ಮಾ ಖಾತೂನ್ ಈ ಜೊತೆಯಾಟವನ್ನು ಮುರಿದರು. ಚಾಮರಿ ನಂತರವೂ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್ ಜೊತೆಗೂಡಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಬೌಲರ್‌ಗಳನ್ನು ಕಂಗೆಡಿಸಿದರು. 17ನೇ ಓವರ್‌ನಲ್ಲಿ ಹರ್ಲೀನ್ ಡಿಯೋಲ್ ಎಸೆತದಲ್ಲಿ ಚಾಮರಿ ಔಟಾದರು. ಜೆಮಿಮಾ ರಾಡ್ರಿಗಸ್ ಮತ್ತು ಶಶಿಕಲಾ ಸಿರಿವರ್ಧನೆ ಬೇಗನೇ ಔಟಾದರು. ಹಿಂದಿನ ಎರಡು ಪಂದ್ಯಗಳಲ್ಲಿ ನೀರಸ ಆಟವಾಡಿದ ಹರ್ಮನ್‌ಪ್ರೀತ್ ಕೌರ್ 29 ಎಸೆತಗಳಲ್ಲಿ 31 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಅವರ ಇನಿಂಗ್ಸ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು.

ಸಂಕ್ಷಿಪ್ತ ಸ್ಕೋರು: ಸೂಪರ್‌ನೋವಾ: 20 ಓವರ್‌ಗಳಲ್ಲಿ 6ಕ್ಕೆ 146 (ಪ್ರಿಯಾ ಪೂನಿಯಾ 30, ಚಾಮರಿ ಅಟ್ಟಪಟ್ಟು 67, ಹರ್ಮನ್‌ಪ್ರೀತ್ ಕೌರ್ 31; ಜೂಲನ್ ಗೋಸ್ವಾಮಿ 17ಕ್ಕೆ1, ಸಲ್ಮಾ ಖಾತೂನ್ 25ಕ್ಕೆ1, ಹರ್ಲೀನ್ ಡಿಯೋಲ್ 34ಕ್ಕೆ1).
ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT