ಇಂಡಿಯನ್ ಪ್ರೀಮಿಯರ್ ಲೀಗ್–2026 ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಎಲ್ಲಾ 10 ತಂಡಗಳು ಕೂಡ ಅಭ್ಯಾಸ ಆರಂಭಿಸಿವೆ. ಈ ನಡುವೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಿಲ್ಡಿಂಗ್ ತರಬೇತುದಾರರನ್ನಾಗಿ ಎಂ.ಎಸ್. ಧೋನಿ ಅವರ ಗೆಳೆಯ, ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಜೇಮ್ಸ್ ಫೋಸ್ಟರ್ಗೆ ಮಣೆ ಹಾಕಿದೆ.

ಫೋಸ್ಟರ್ ಅವರನ್ನು ಸ್ಟೀಫನ್ ಫ್ಲೆಮಿಂಗ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ನ ಕೋಚಿಂಗ್ ಸಿಬ್ಬಂದಿಗೆ ಸೇರಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯು ಸೋಮವಾರ ಮಾಹಿತಿ ನೀಡಿದೆ. ಸಿಎಸ್ಕೆ ತಂಡದ ಬ್ಯಾಟಿಂಗ್ ಕೋಚ್ ಆಗಿ ಮೈಕೆಲ್ ಹಸ್ಸಿ ಮತ್ತು ಬೌಲಿಂಗ್ ಕೋಚ್ ಆಗಿ ಎರಿಕ್ ಸಿಮ್ಮನ್ಸ್ ಇದ್ದಾರೆ. 45 ವರ್ಷದ ಫೋಸ್ಟರ್ 2001 ರಿಂದ 2009ರ ನಡುವೆ ಇಂಗ್ಲೆಂಡ್ ತಂಡಕ್ಕಾಗಿ 7 ಟೆಸ್ಟ್, 11 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಪೋಸ್ಟರ್ ಅವರು ಈಗಾಗಲೇ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಕೋಚಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾರೆ. ದಿ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ನ ಸಹಾಯಕ ಕೋಚ್ ಕೂಡ ಆಗಿದ್ದಾರೆ.

‘ನಮ್ಮ ಫೀಲ್ಡಿಂಗ್ ಕೋಚ್ ಜೇಮ್ಸ್ ಫೋಸ್ಟರ್ ಅವರು ಯೆಲ್ಲೋ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಂಗ್ಲೆಂಡ್ನ ಮಾಜಿ ವಿಕೆಟ್ಕೀಪರ್ ಮತ್ತು ವಿಶ್ವಾದ್ಯಂತ ಬೇರೆ ಬೇರೆ ತಂಡಗಳಿಗೆ ತರಬೇತುದಾರರಾಗಿ ಯಶಸ್ಸು ಸಾಧಿಸಿರುವ ಅವರು ನಮ್ಮ ತಂಡದ ಜೊತೆ ಹೊಸ ಅಧ್ಯಾಯ ಆರಂಭಿಸಲಿದ್ದಾರೆ’ ಎಂದು CSK ತಂಡವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.