ಶನಿವಾರ, ಜುಲೈ 31, 2021
25 °C

ಹಿರಿಯ ಕ್ರಿಕೆಟಿಗ ಚೇತನ್‌ ಚೌಹಾನ್‌ಗೆ ಕೋವಿಡ್‌-19

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಭಾರತದ ಹಿರಿಯ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದಲ್ಲಿ ಸಂಪುಟ ಸಚಿವ ಕೂಡ ಆಗಿರುವ ಚೇತನ್‌ ಚೌಹಾನ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಚೇತನ್‌ ಚೌಹಾನ್‌ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಾಣಿಕೊಂಡಿದ್ದರಿಂದ ಶುಕ್ರವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು.

72 ವರ್ಷದ ಚೌಹಾನ್‌ ಅವರು ಲಖನೌನ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೌಹಾನ್‌ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಇನ್ನುಳಿದ ಸದಸ್ಯರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಅವರೆಲ್ಲರೂ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಚೌಹಾನ್, ಕೊರೊನಾ ವೈರಸ್ ಸೋಂಕಿಗೆ ಒಳಗಾದ ಕೆಲವೇ ಕೆಲವು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟಿಗರಾದ ಶಾಹಿದ್ ಆಫ್ರಿದಿ ಮತ್ತು ಸ್ಕಾಟ್ಲೆಂಡ್‌ನ ಮಜೀದ್ ಹಕ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರೀಗ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಚೇತನ್‌ ಚೌಹಾನ್‌ ಅವರು 1969 ಮತ್ತು 1978ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್ ಪಂದ್ಯಗಳಲ್ಲಿ ಆಡಿ, 2084 ರನ್ ಗಳಿಸಿದ್ದಾರೆ. ಸುನೀಲ್‌ ಗಾವಸ್ಕರ್‌ ಜೊತೆ ಹಲವು ವರ್ಷಗಳ ಕಾಲ ಟೆಸ್ಟ್‌ ಪಂದ್ಯಗಳಲ್ಲಿ ಆರಂಭ ಆಟಗಾರರಾಗಿದ್ದರು. ಏಳು ಏಕದಿನ ಪಂದ್ಯಗಳಲ್ಲಿ 153 ರನ್ ಕಲೆಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು