ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರನ್‌ಗೆ ಚೀನಾ ಆಲೌಟ್‌ !

Last Updated 14 ಜನವರಿ 2019, 19:21 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಚೀನಾ ಮಹಿಳಾ ತಂಡದವರು ಥಾಯ್ಲೆಂಡ್‌ ಟ್ವೆಂಟಿ–20 ಸ್ಮ್ಯಾಷ್‌ ಕ್ರಿಕೆಟ್‌ ಟೂರ್ನಿಯಲ್ಲಿ 14ರನ್‌ಗಳಿಗೆ ಆಲೌಟ್‌ ಆಗಿದ್ದಾರೆ.

ಟ್ವೆಂಟಿ–20 ಕ್ರಿಕೆಟ್‌ ಇತಿಹಾಸದಲ್ಲಿ (ಮಹಿಳೆಯರು ಮತ್ತು ಪುರುಷರು ಸೇರಿ) ತಂಡವೊಂದು ದಾಖಲಿಸಿದ ಅತಿ ಕಡಿಮೆ ಮೊತ್ತ ಇದಾಗಿದೆ.

ಈ ಪಂದ್ಯದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) 189ರನ್‌ಗಳಿಂದ ಗೆದ್ದಿದೆ. ಮಹಿಳಾ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ತಂಡವೊಂದು ದಾಖಲಿಸಿದ ಅತಿ ದೊಡ್ಡ ಅಂತರದ ಜಯ ಇದಾಗಿದೆ.

ಮೊದಲು ಬ್ಯಾಟ್‌ ಮಾಡಿದ ಯುಎಇ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 203ರನ್‌ ದಾಖಲಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಚೀನಾ, ಆರಂಭದಿಂದಲೇ ಕುಸಿತದ ಹಾದಿ ಹಿಡಿಯಿತು. ಈ ತಂಡದ ಹಿನ್‌ ಲಿಲಿ (4ರನ್‌) ಗರಿಷ್ಠ ಸ್ಕೋರರ್‌ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT