ಚೀನಾ ಓಪನ್‌ ಟೂರ್ನಿ: ಹೊರನಡೆದ ಒಸಾಕ

7

ಚೀನಾ ಓಪನ್‌ ಟೂರ್ನಿ: ಹೊರನಡೆದ ಒಸಾಕ

Published:
Updated:
Deccan Herald

ಬೀಜಿಂಗ್‌: ಜಪಾನ್‌ ಆಟಗಾರ್ತಿ ನವೊಮಿ ಒಸಾಕ ಅವರು ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.

ಶುಕ್ರವಾರ ನಡೆದ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಒಸಾಕ ಅವರು 6–3, 4–6, 5–7 ರಿಂದ ಚೀನಾದ ಜಾಂಗ್‌ ಶೂಯಿ ಎದುರು ಸೋತರು.

ಈಚೆಗೆ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ನವೊಮಿ ಅವರು ಇಲ್ಲಿಯೂ ಗೆಲ್ಲುವ ಭರವಸೆ ಮೂಡಿಸಿದ್ದರು. ಈ ಪಂದ್ಯದಲ್ಲಿ ಆತಿಥೇಯ ಚೀನಾದ ಆಟಗಾರ್ತಿಯ ಎದುರು ಉತ್ತಮವಾಗಿ ಆರಂಭ ಮಾಡಿದ್ದರು. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದ್ದರು. ಉತ್ತಮ ಸರ್ವ್‌ಗಳ ಮೂಲಕ 6–3 ರಿಂದ ಸೆಟ್‌ ಗೆದ್ದಿದ್ದರು.

ಆದರೆ ಎರಡನೇ ಸೆಟ್‌ನಲ್ಲಿ ಚೀನಾದ ಜಾಂಗ್ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಇಬ್ಬರ ನಡುವೆಯೂ ತುರುಸಿನ ಪೈಪೋಟಿ ನಡೆಯಿತು. ಟೈಬ್ರೇಕರ್‌ನಲ್ಲಿ ಚೀನಾದ ಆಟಗಾರ್ತಿ ಮೇಲುಗೈ ಸಾಧಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !