ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿ ಮತ್ತು ಪಂದ್ಯಪೂರ್ವ ಸಿದ್ಧತೆಗಳನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯು ಶುಕ್ರವಾರ ‘ಅಣಕು ಅವಲೋಕನ’ ಮಾಡಿತು.

ಇದೇ 28ರಂದು ಐಪಿಎಲ್ ಟೂರ್ನಿಯ ಉದ್ಘಾಟನೆ ಪಂದ್ಯ ಮತ್ತು ಏಪ್ರಿಲ್ ಐದರಂದು ಮತ್ತೊಂದು ಪಂದ್ಯವು ಇಲ್ಲಿ ಆಯೋಜನೆಗೊಳ್ಳಲಿದೆ. ಈಚೆಗೆ ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಪಂದ್ಯಗಳು ನಿಗದಿಯಾಗಿವೆ. ಹೋದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. 11 ಜನರು ಸಾವಿಗೀಡಾಗಿದ್ದರು. ಅದರ ನಂತರದ ಬೆಳವಣಿಗೆಯಲ್ಲಿ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮಾಡಬೇಕಾದ ನವೀಕರಣ ಕಾರ್ಯಗಳನ್ನು ಸರ್ಕಾರದ ನಿಯೋಗವು ಶಿಫಾರಸು ಮಾಡಿತ್ತು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇರುವ ಪರಿಶೀಲನಾ ಸಮಿತಿಯು ಈ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುತ್ತಿದೆ.

ಶುಕ್ರವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ‘ಅಣಕು ಪ್ರದರ್ಶನ’ ನಡೆಸಲಾಯಿತು, ಇದರಲ್ಲಿ ತಜ್ಞರ ಸಮಿತಿ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಕುರಿತ ವರದಿಯನ್ನು ಸಮಿತಿಯು ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರವು ತನ್ನ ನಿಲುವನ್ನು ಇದೇ 16ರಂದು ಪ್ರಕಟಿಸುವ ನಿರೀಕ್ಷೆ ಇದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು 15ರಿಂದ ಈ ಕ್ರೀಡಾಂಗಣದಲ್ಲಿ ಪೂರ್ವತಾಲೀಮು ಆರಂಭಿಸಲಿದೆ.

ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಡಳಿತ ಸಮಿತಿಯು ಇದೆ.

‘ಬೆಳಿಗ್ಗೆ ಪೂರ್ಣ ಪ್ರಮಾಣದ ಅಣಕು ಅವಲೋಕನ ನಡೆಯಿತು. ಮಾರ್ಚ್ 16ರಂದು ಸಂಜೆಯ ವೇಳೆಗೆ ಸರ್ಕಾರದಿಂದ ಸೂಚನೆ ಬರುವ ನಿರೀಕ್ಷೆ ಇದೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಂಗಣದ ಪ್ರವೇಶದ್ವಾರಗಳನ್ನು ಆರು ಮೀಟರ್ ಬದಲಾಗಿ ಒಂಬತ್ತು ಮೀಟರ್ಗೆ ವಿಸ್ತರಿಸಲಾಗಿದೆ. ಹೊಸ ಗೇಟ್ಗಳನ್ನು ಅಳವಡಿಸಲಾಗಿದೆ. ಬಿ ಮೈದಾನವನ್ನು ಪ್ರೇಕ್ಷಕರಿಗೆ ಕಾಯುವಿಕೆಯ ಸ್ಥಳವಾಗಿ ಸಿದ್ಧಗೊಳಿಸಲಾಗಿದೆ. ತಮ್ಮ ಸ್ಟ್ಯಾಂಡ್ಗಳಿಗೆ ಹೋಗಲು ಸುಮಾರು 10 ಸಾವಿರ ಜನರು ಸಾಲುಗಟ್ಟಿ ಸಾಗಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಜನದಟ್ಟಣೆ ನಿರ್ವಹಣೆ ಸುಲಭವಾಗಲಿದೆ. ಟಿಕೆಟ್ ಉಳ್ಳವರ ಪ್ರವೇಶವೂ ಸರಾಗವಾಗಲಿದೆ ಎಂದು ಮೂಲಗಳು ಹೇಳಿವೆ.

ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ ಮಾರ್ಗಗಳ ವ್ಯವಸ್ಥೆಗಳನ್ನು ಸಹ ದ್ವಾರಗಳಲ್ಲಿ ಜಾರಿಗೆ ತರಲಾಗುವುದು. ಇದು ಮಧ್ಯಾಹ್ನ 3.30ಕ್ಕೆ ಅಥವಾ ರಾತ್ರಿ 7.30 ಕ್ಕೆ ಆರಂಭವಾಗುವ ಪಂದ್ಯಗಳ ಸಂದರ್ಭದಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ತೆರೆಯುತ್ತದೆ.

ಇದಲ್ಲದೆ, ಆರ್ಸಿಬಿ ಪಂದ್ಯ ನಡೆಯುವ ದಿನಗಳಲ್ಲಿ ಕ್ರೀಡಾಂಗಣದ ನಾಲ್ಕು ಮೂಲೆಗಳಲ್ಲಿ ಒಂದೊಂದು ಸಂಚಾರಿ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಾಗುವುದು.

ಆರ್ಸಿಬಿಯು ಲೀಗ್ ಹಂತದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಹಾಗೂ ರಾಯಪುರದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.