ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ ಬ್ಯಾಟಿಂಗ್‌ ದೈತ್ಯ ಕ್ರಿಸ್ ಗೇಲ್

7

ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ ಬ್ಯಾಟಿಂಗ್‌ ದೈತ್ಯ ಕ್ರಿಸ್ ಗೇಲ್

Published:
Updated:

ಲಂಡನ್‌: ಬಾರ್ಬಡೋಸ್‌ ಎದುರಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ವೆಸ್ಟ್‌ ಇಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಬಾರ್ಬಡೋಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಜಮೈಕಾ, ಗೇಲ್‌ ಶತಕದ ನೆರವಿನಿಂದ 47.4 ಓವರ್‌ಗಳಲ್ಲಿ 226ರನ್‌ ಕಲೆಹಾಕಿ ಆಲೌಟ್‌ ಆಯಿತು.

ಇದಕ್ಕುತ್ತರವಾಗಿ ಬಾರ್ಬಡೋಸ್‌ 47.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 196ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಜಮೈಕಾ 33 ರನ್‌ ಅಂತರದ ಗೆಲುವು ಸಾಧಿಸಿತು.

ಪಂದ್ಯದ ಬಳಿಕ ಮಾತನಾಡಿದ ಕ್ರಿಸ್‌ ಗೇಲ್‌, ‘ಜಮೈಕಾ ತಂಡದ ಪರ ಇದು ನನ್ನ ಕೊನೆಯ ಏಕದಿನ ಪಂದ್ಯ. ಈ ಪಂದ್ಯದಲ್ಲಿ ಶತಕ ಬಾರಿಸಿರುವುದು ಸಂತಸದ ವಿಚಾರ. ಇದು ಸದಾ ನನ್ನ ನೆನಪಿನಲ್ಲುಳಿಯಲಿದೆ. ತಂಡವನ್ನು ಗೆಲುವಿನತ್ತ ಮುನ್ನಡೆಸುವುದು ಬಹಳ ವಿಶೇಷವಾದದ್ದು. ದೇಶವನ್ನು ಪ್ರತಿನಿಧಿಸುವುದು ನಾಯಕನಾಗುವುದಕ್ಕಿಂತಲೂ ಹೆಚ್ಚು ಖುಷಿ ನೀಡುವ ಸಂಗತಿ. 39 ವರ್ಷವಾದರೂ ಇಲ್ಲಿ ಉಳಿದಿರುವುದಕ್ಕೆ ಹೆಮ್ಮೆ ಮತ್ತು ಧನ್ಯತಾ ಭಾವವಿದೆ. ಜಮೈಕಾ ಪರ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಅಂತಿಮ ಪಂದ್ಯದಲ್ಲಿ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದ ತಂಡದ ಎಲ್ಲ ಸದಸ್ಯರಿಗೂ ಧನ್ಯವಾದಗಳು’ ಎಂದಿರುವ ಅವರು, ಕಳೆದ 25 ವರ್ಷಗಳ ಕ್ರಿಕೆಟ್‌ ಬದುಕಿನ ಕುರಿತೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಕ್ರಿಕೆಟ್‌ನ ಆಚೆಗೂ ಬದುಕು ಇದೆ. ಹಾಗಾಗಿ ಜೀವನವನ್ನು ಅನುಭವಿಸಲು ಬಯಸುತ್ತೇನೆ. 25 ವರ್ಷಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್‌ ಆಡಿದ್ದೇನೆ. ಇದು ವೈಯಕ್ತಿಕವಾಗಿ ದೊಡ್ಡ ಸಾಧನೆಯೇ ಸರಿ. ನನಗೂ ಸಂಸಾರವಿದೆ. ಅವರೊಂದಿಗೂ ಕಾಲ ಕಳೆಯಲು ಬಯಸುತ್ತೇನೆ’ ಎಂದಿದ್ದಾರೆ.

ಇದುವರೆಗೆ 356 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಗೇಲ್‌, 38.14ರ ಸರಾಸರಿಯಲ್ಲಿ 12,436 ರನ್‌ ಕಲೆ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !