ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ತಂಡಕ್ಕೆ ಕ್ರಿಸ್‌ ಗೇಲ್‌ಗೆ ಬುಲಾವ್

Last Updated 26 ಜುಲೈ 2019, 19:45 IST
ಅಕ್ಷರ ಗಾತ್ರ

ಸೇಂಟ್ ಜಾನ್ಸ್‌, ಆ್ಯಂಟಿಗಾ, ಬಾರ್ಬುಡಾ: ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ವೆಸ್ಟ್ ಇಂಡೀಸ್‌ನ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.

ಭಾರತದ ಎದುರು ಮುಂದಿನ ತಿಂಗಳು ನಡೆಯಲಿರುವ ಸರಣಿಯಲ್ಲಿ ಆಡಲಿರುವ ವಿಂಡೀಸ್ ತಂಡವನ್ನು ಶುಕ್ರವಾರ ಪ್ರಕಟಿಸಲಾಯಿತು. ಈಚೆಗೆ ಟ್ವೆಂಟಿ–20 ಸರಣಿಗಾಗಿ ಪ್ರಕಟಿಸಿದ್ದ ತಂಡದಲ್ಲಿ ಕ್ರಿಸ್‌ ಗೇಲ್ ಆಯ್ಕೆಯಾಗಿರಲಿಲ್ಲ. ಆದರೆ ಅವರು ಟೆಸ್ಟ್ ಸರಣಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಅದರಲ್ಲಿ ತಮ್ಮ ನಿವೃತ್ತಿ ಘೋಷಿಸುವುದಾಗಿಯೂ ಈಚೆಗೆ ಹೇಳಿದ್ದರು.

ಆದರೆ ಇದೀಗ ಅವರು ಏಕದಿನ ಸರಣಿಯಲ್ಲಿ ಆಡಲು ಸಿದ್ಧರಾಗಿದ್ದಾರೆ. ಇದರಿಂದಾಗಿ ಅವರು ನಿವೃತ್ತಿಯ ನಿರ್ಧಾರವನ್ನು ಬದಲಿಸಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಬ್ರಯನ್ ಲಾರಾ (10405 ರನ್) ಅವರ ದಾಖಲೆಯನ್ನು ಮುರಿಯುವ ಅವಕಾಶ ಗೇಲ್ (10393) ಅವರಿಗೆ ಇದೆ.

‘ಕ್ರಿಸ್ ತಂಡದಲ್ಲಿರುವುದರಿಂದ ಹೆಚ್ಚಿನ ಬಲ ಬಂದಂತಾಗಿದೆ. ಅವರ ಅನುಭವ ಮತ್ತು ಆಟ ಎರಡೂ ಉಪಯುಕ್ತ. ಸಹ ಆಟಗಾರರಿಗೆ ಅವರು ಉತ್ತಮ ಸಲಹೆಗಳನ್ನು ನೀಡುತ್ತಾರೆ. ತಂಡದಲ್ಲಿ ಲವಲವಿಕೆ ಮೂಡಿಸುತ್ತಾರೆ’ ಎಂದು ತಂಡದ ಕೋಚ್ ಫ್ಲಾಯ್ಡ್‌ ರೀಫರ್ ಹೇಳಿದ್ದಾರೆ.

39 ವರ್ಷದ ಗೇಲ್ ಒಟ್ಟು 298 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ತಂಡ ಇಂತಿದೆ: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯಾನ್ ಅಲೆನ್, ಕಾರ್ಲೋಸ್ ಬ್ರಾಥ್‌ವೇಟ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್‌ ಚೇಸ್, ಶೆಲ್ಡನ್ ಕಾಟ್ರೆಲ್, ಕ್ರಿಸ್ ಗೇಲ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್ (ವಿಕೆಟ್‌ಕೀಪರ್), ಎವಿನ್ ಲೂಯಿಸ್, ಕೀಮೊ ಪಾಲ್, ನಿಕೋಲಸ್ ಪೂರನ್ (ವಿಕೆಟ್‌ಕೀಪರ್), ಕೇಮರ್ ರೋಚ್, ಒಷೇನ್ ಥಾಮಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT