ನವದೆಹಲಿ: ‘ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಸಾರ್ವಜನಿಕ ಪ್ರಾಧಿಕಾರವಲ್ಲ. ಹಾಗಾಗಿ, ಪಾರದರ್ಶಕತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಅದು ಬಾಧ್ಯಸ್ಥನಲ್ಲ’ ಎಂದು ಕೇಂದ್ರ ಮಾಹಿತಿ ಆಯೋಗವು ಸೋಮವಾರ ತೀರ್ಪು ನೀಡಿದೆ. ಆ ಮೂಲಕ 2018ರ ತನ್ನದೇ ಆದೇಶವನ್ನು ರದ್ದುಗೊಳಿಸಿದೆ.

ಕ್ರಿಕೆಟ್ ಆಡಳಿತ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಣಯಗಳನ್ನು ಬಿಸಿಸಿಐ ತೆಗೆದುಕೊಳ್ಳುತ್ತಿದ್ದರೂ, ಅದನ್ನು ಸಾರ್ವಜನಿಕ ಪ್ರಾಧಿಕಾರವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಸರ್ಕಾರದ ಒಡೆತನ, ನಿಯಂತ್ರಣ ಅಥವಾ ಸರ್ಕಾರದ ಜೊತೆ ಹಣಕಾಸಿನ ವ್ಯವಹಾರಗಳನ್ನು ಹೊಂದಿಲ್ಲ ಎಂದು ಮಾಹಿತಿ ಆಯುಕ್ತ ಪಿ.ಆರ್. ರಮೇಶ್ ಹೇಳಿದ್ದಾರೆ.

ಬಿಸಿಸಿಐ, ಭಾರತ ತಂಡವನ್ನು ಪ್ರತಿನಿಧಿಸುವ ಆಟಗಾರರ ಆಯ್ಕೆ, ಕ್ರಿಕೆಟ್ ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಸರ್ಕಾರದಿಂದ ಸಹಾಯ ಪಡೆಯುವ ಅಧಿಕಾರದ ಕುರಿತು ವಿವರಗಳನ್ನು ಸಲ್ಲಿಸುವಂತೆ 2018ರಲ್ಲಿ ಸಾರ್ವಜನಿಕರೊಬ್ಬರು ಕ್ರೀಡಾ ಸಚಿವಾಲಯಕ್ಕೆ ಆರ್ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಸಚಿವಾಲಯವು ’ಆ ಮಾಹಿತಿ ತನ್ನ ಬಳಿ ಇಲ್ಲ’ ಎಂದು ಹೇಳಿದಾಗ, ಈ ಪ್ರಕರಣ ಕೇಂದ್ರ ಮಾಹಿತಿ ಆಯೋಗದ (CIC) ಮೆಟ್ಟಿಲೇರಿತು.

‘ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ಸೆಕ್ಷನ್ 2(ಎಚ್)ರ ಪ್ರಕಾರ, ಬಿಸಿಸಿಐ ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ, ಪ್ರಸ್ತುತ ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳಲ್ಲಿ ಕಾಯ್ದೆಯ ನಿಬಂಧನೆಗಳು ಅದಕ್ಕೆ ಅನ್ವಯಿಸುವುದಿಲ್ಲ’ ಎಂದು ರಮೇಶ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಈ ತೀರ್ಪಿನ ಮೂಲಕ 2018ರಲ್ಲಿ ಆಗಿನ ಮಾಹಿತಿ ಆಯುಕ್ತರು ಮತ್ತು ಕಾನೂನು ಪ್ರಾಧ್ಯಾಪಕರಾದ ಎಂ. ಶ್ರೀಧರ ಆಚಾರ್ಯುಲು ಅವರು ನೀಡಿದ್ದ ಆದೇಶವನ್ನು ರದ್ದುಗೊಳಿಸಿದರು. ಬಿಸಿಸಿಐ ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಶ್ರೀಧರ ಆಚಾರ್ಯುಲು ಪರಿಗಣಿಸಿದ್ದರು. ಮಾತ್ರವಲ್ಲ, ಅದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಆಡಳಿತ ಸಮಿತಿಯವರು ಆರ್ಟಿಐ ಕಾಯ್ದೆಯಡಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೇಲ್ಮನವಿ ಅಧಿಕಾರಿಗಳನ್ನು ನೇಮಿಸುವಂತೆ ನಿರ್ದೇಶಿಸಿದ್ದರು.

2018ರ ಆದೇಶವನ್ನು ಪ್ರಶ್ನಿಸಿದ್ದ ಬಿಸಿಸಿಐ, ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ನ್ಯಾಯಾಲಯವು 2025ರ ಸೆಪ್ಟೆಂಬರ್ನಲ್ಲಿ ಬಿಸಿಸಿಐ vs ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಅವಲೋಕನಗಳ ಹಿನ್ನೆಲೆಯಲ್ಲಿ ಮರುಪರಿಶೀಲಿಸುವಂತೆ ಪ್ರಕರಣವನ್ನು ಮಾಹಿತಿ ಆಯೋಗಕ್ಕೆ ರವಾನಿಸಿತ್ತು. ಜೊತೆಗೆ, ಕಾನೂನು ಸ್ಥಿತಿಗತಿಗಳನ್ನು ಮರುಪರಿಶೀಲಿಸಿ ಹೊಸ ಆದೇಶ ಹೊರಡಿಸುವಂತೆ ಸೂಚಿಸಿತ್ತು.

ಈ ವಿಷಯವನ್ನು ಪುನರ್ವಿಮರ್ಶಿಸಿದ ಕೇಂದ್ರ ಮಾಹಿತಿ ಆಯೋಗವು, ಬಿಸಿಸಿಐ ಅನ್ನು ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಿರುವ ಖಾಸಗಿ ಸ್ವಾಯತ್ತ ಸಂಸ್ಥೆ. ಇದು ಸಂವಿಧಾನ, ಸಂಸತ್ತು, ರಾಜ್ಯ ಶಾಸಕಾಂಗ ಅಥವಾ ಸರ್ಕಾರಿ ಅಧಿಸೂಚನೆಯ ಮೂಲಕ ಸ್ಥಾಪಿಸಲಾಗಿಲ್ಲ ಎಂದು ಹೇಳಿದೆ.

‘ಬಿಸಿಸಿಐನ ಕಾರ್ಯಗಳು, ಹಣಕಾಸು, ಆಡಳಿತ, ನಿರ್ವಹಣೆ ಮತ್ತು ವ್ಯವಹಾರಗಳ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ. ಹಾಗಾಗಿ, ಸಾರ್ವಜನಿಕ ಪ್ರಾಧಿಕಾರದ ಸ್ಥಾನವನ್ನು ಬಿಸಿಸಿಐಗೆ ನೀಡಲಾಗುವುದಿಲ್ಲ’ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.