ಬುಧವಾರ, ಫೆಬ್ರವರಿ 19, 2020
29 °C

ಸಿ.ಕೆ.ನಾಯ್ಡು ಟ್ರೋಫಿ: ‘ಡ್ರಾ’ ಪಂದ್ಯದಲ್ಲಿ ಸ್ವಪ್ನಿಲ್‌ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗೋಠಾಣೆ (ಮಹಾರಾಷ್ಟ್ರ): ಸ್ವಪ್ನಿಲ್‌ ಪಿ.ಫುಲ್ಪಾಗರ್‌ (121, 159 ಎ, 15 ಬೌಂ, 1ಸಿ) ಅವರ ಶತಕದ ನೆರವಿನಿಂದ ಮಹಾರಾಷ್ಟ್ರ, ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧದ ಪಂದ್ಯವನ್ನು ಭಾನುವಾರ ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.‌

ಕರ್ನಾಟಕ 50 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ಮೂರು ಅಂಕ ಪಡೆದರೆ, ಮಹಾರಾಷ್ಟ್ರ ಒಂದು ಅಂಕ ಪಡೆಯಿತು.

ಶನಿವಾರ ಮೂರನೇ ದಿನದಾಟದ ಕೊನೆಗೆ, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 53 ರನ್‌ ಗಳಿಸಿದ್ದ ಮಹಾರಾಷ್ಟ್ರ 7 ವಿಕೆಟ್‌ಗೆ 245 ರನ್‌ ಗಳಿಸಿ ನಾಲ್ಕು ದಿನಗಳ ಪಂದ್ಯ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌: ಮಹಾರಾಷ್ಟ್ರ 367 ಮತ್ತು 80 ಓವರುಗಳಲ್ಲಿ 7 ವಿಕೆಟ್‌ಗೆ 245 (ಸ್ವಪ್ನಿಲ್‌ ಪಿ.ಫುಲ್ಪಾಗರ್‌ 121, ಎ.ಕೆ.ಕಾಳೆ 29; ಎಚ್‌.ಕೆ.ತುಷಾರ್‌ 22ಕ್ಕೆ2, ಕಿಶನ್‌ ಎಸ್‌.ಬೇದ್ರೆ 19ಕ್ಕೆ2); ಕರ್ನಾಟಕ: 128 ಓವರುಗಳಲ್ಲಿ 417.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)