ಬೆಂಗಳೂರು: ಆಲ್‌ರೌಂಡರ್ ಅನೀಶ್ವರ್ ಗೌತಮ್ ಅವರನ್ನು ತಮಿಳುನಾಡು ಮತ್ತು ತ್ರಿಪುರ ವಿರುದ್ಧ ಆಡಲಿರುವ ಬಿಸಿಸಿಐ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ತಮಿಳುನಾಡು ವಿರುದ್ಧ ಪಂದ್ಯ ಹುಬ್ಬಳ್ಳಿಯಲ್ಲಿ ಅ. 13 ರಿಂದ 16ರವರೆಗೆ ನಡೆಯಲಿದೆ. ತ್ರಿಪುರ ವಿರುದ್ಧದ ಪಂದ್ಯ ಅಗರ್ತಲಾದಲ್ಲಿ ಅ. 20 ರಿಂದ 23ರವರೆಗೆ ನಡೆಯಲಿದೆ.
15 ಆಟಗಾರರ ತಂಡ ಇಂತಿದೆ: ವಿಶಾಲ್ ಓನತ್, ಮ್ಯಾಕ್ನಿಲ್ ನೊರೊನ್ಹಾ, ಜಾಸ್ಪರ್ ಇ.ಜೆ., ಪ್ರಖರ್ ಚತುರ್ವೇದಿ, ಹರ್ಷಿಲ್ ಧರ್ಮಾನಿ, ಅನೀಶ್ವರ್ ಗೌತಮ್ (ನಾಯಕ), ಯಶೋವರ್ಧನ್ ಪರಂತಾಪ್ (ಉಪ ನಾಯಕ), ಕೃತಿಕ್ ಕೃಷ್ಣ, (ವಿಕೆಟ್ ಕೀಪರ್), ಮನ್ವಂತ ಕುಮಾರ್ ಎಲ್., ಮೋನಿಶ್ ರೆಡ್ಡಿ, ಶಶಿಕುಮಾರ್ ಕೆ., ಪಾರಸ್ ಗುರುಬಕ್ಷ್ ಆರ್ಯ, ಶಿಖರ್ ಶೆಟ್ಟಿ, ಸಂಜಯ್ ಅಶ್ವಿನ್, ಧನುಷ್ ಗೌಡ. ಕೋಚ್: ಸೋಮಶೇಖರ ಶಿರಗುಪ್ಪಿ, ಸಹಾಯಕ ಕೋಚ್: ರೋಹಿತ್ ಸಬರವಾಲ್, ಮ್ಯಾನೇಜರ್: ಪ್ರವೀಣ್ ಸಿಂಗ್.