ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾರ್ಕ್‌ಗೆ ‘ಆರ್ಡರ್‌ ಆಫ್‌ ಆಸ್ಟ್ರೇಲಿಯಾ’ ಗೌರವ

Last Updated 8 ಜೂನ್ 2020, 7:33 IST
ಅಕ್ಷರ ಗಾತ್ರ

ಸಿಡ್ನಿ : ವಿಶ್ವಕಪ್‌ ವಿಜೇತಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಮೈಕೆಲ್‌ ಕ್ಲಾರ್ಕ್‌ ಅವರು ಸೋಮವಾರ ‘ಆರ್ಡರ್‌ ಆಫ್‌ ಆಸ್ಟ್ರೇಲಿಯಾ’ದ ಅಧಿಕಾರಿಗಳಲ್ಲಿ ಒಬ್ಬರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಈ ಗೌರವ ಸ್ವೀಕರಿಸಿರುವ ದೇಶದ ದಿಗ್ಗಜ ಆಟಗಾರರಾದ ಅಲನ್‌ ಬಾರ್ಡರ್‌ ಹಾಗೂ ಸ್ಟೀವ್‌ ವಾ ಅವರ ಸಾಲಿಗೆ ಸೇರಿದ್ದಾರೆ.

2015ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಕ್ಲಾರ್ಕ್‌ ನೇತೃತ್ವದ ತಂಡವು ಪ್ರಶಸ್ತಿ ಎತ್ತಿಹಿಡಿದಿತ್ತು.

ಅರ್ಹ ಅಥವಾ ಮಹತ್ವದ ಸಾಧನೆ ಮಾಡಿದ ಆಟಗಾರರಿಗೆ ‘ಆರ್ಡರ್‌ ಆಫ್‌ ಆಸ್ಟ್ರೇಲಿಯಾ’ದ ಮುಖ್ಯ ವಿಭಾಗದಲ್ಲಿ ಅಧಿಕಾರಿ ಹುದ್ದೆಯ ಗೌರವ ನೀಡಲಾಗುತ್ತದೆ.

ಈ ಕುರಿತು ಚಾನೆಲ್‌ 9 ಎಂಬ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿರುವ ಕ್ಲಾರ್ಕ್‌, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದನ್ನು, ಜೂನ್‌ನಲ್ಲಿ ಮಾಡಿದ ಏಪ್ರಿಲ್‌ ಫೂಲ್‌ ಎಂದುಕೊಂಡಿದ್ದೆ. ಅಚ್ಚರಿಯಾಗಿದೆ ಮತ್ತು ಹೆಮ್ಮೆಯೂ’ ಎಂದು ಹೇಳಿದ್ದಾರೆ.

ಈ ಗೌರವ ಸ್ವೀಕರಿಸಿದ್ದ ಆಸ್ಟ್ರೇಲಿಯಾ ತಂಡದ ನಾಯಕರುಗಳೆಂದರೆ ರಿಕಿ ಪಾಂಟಿಂಗ್, ಮಾರ್ಕ್‌ ಟೇಲರ್‌ ಹಾಗೂ ಬಾಬ್‌ ಸಿಂಪ್ಸನ್‌.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟಗಾರನಾಗಿ, ನಾಯಕತ್ವದ ಮೂಲಕ ಕ್ರಿಕೆಟ್‌ಗೆ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕ್ಲಾರ್ಕ್‌ ಅವರಿಗೆ ಈ ಗೌರವ ನೀಡಲಾಗಿದೆ.

ಕ್ಲಾರ್ಕ್‌ ಅವರು2015ರ ವಿಶ್ವಕಪ್‌ ವಿಜಯದ ಬಳಿಕಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ತಂಡದ ಪರ 115 ಟೆಸ್ಟ್‌, 245 ಏಕದಿನ ಹಾಗೂ 34 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 8643, 7981 ಹಾಗೂ 488 ರನ್‌ ಕಲೆಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT