ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್‌ ದಾಳಿಗೆ ಬೆದರಿದ ಐರ್ಲೆಂಡ್‌

ಕುಸಾಲ್ ಮೆಂಡಿಸ್‌ ಅರ್ಧಶತಕ: ಶ್ರೀಲಂಕಾ ಜಯಭೇರಿ
Last Updated 23 ಅಕ್ಟೋಬರ್ 2022, 11:14 IST
ಅಕ್ಷರ ಗಾತ್ರ

ಹೋಬರ್ಟ್‌ : ಸ್ಪಿನ್ನರ್‌ಗಳ ಕೈಚಳಕ ಮತ್ತು ಕುಸಾಲ್‌ ಮೆಂಡಿಸ್‌ ಗಳಿಸಿದ ಅಜೇಯ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 9 ವಿಕೆಟ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 128 ರನ್‌ ಗಳಿಸಿದರೆ, ಲಂಕಾ ಇನ್ನೂ ಐದು ಓವರ್‌ಗಳು ಇರುವಂತೆಯೇ 1 ವಿಕೆಟ್‌ಗೆ 133 ರನ್‌ ಗಳಿಸಿ ಗೆದ್ದಿತು.

ಟಾಸ್ ಗೆದ್ದ ಐರ್ಲೆಂಡ್‌ ತಂಡದ ನಾಯಕ ಅ್ಯಂಡ್ರ್ಯೂ ಬಲ್ಬಿರ್ನಿ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದರು. ಆದರೆ ಲಂಕಾ ಬೌಲರ್‌ಗಳ ಶಿಸ್ತಿನ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಸ್ಪಿನ್ನರ್‌ಗಳಾದ ಮಹೀಶ್‌ ತೀಕ್ಷಣ (19ಕ್ಕೆ 2) ಮತ್ತು ವಣಿಂದು ಹಸರಂಗ (25ಕ್ಕೆ 2) ಹಾಗೂ ವೇಗಿಗಳು ಮಿಂಚಿದರು.

ಸಂಕ್ಷಿ‍‍ಪ್ತ ಸ್ಕೋರ್‌: ಐರ್ಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 128 (ಪಾಲ್‌ ಸ್ಟರ್ಲಿಂಗ್ 34, ಹ್ಯಾರಿ ಟೆಕ್ಟರ್‌ 45, ಜಾರ್ಜ್‌ ಡಾಕ್ರೆಲ್‌ 14, ಮಹೀಶ್‌ ತೀಕ್ಷಣ 19ಕ್ಕೆ 2, ವಣಿಂದು ಹಸರಂಗ 25ಕ್ಕೆ 2, ಲಾಹಿರು ಕುಮಾರ 12ಕ್ಕೆ 1, ಧನಂಜಯ ಡಿಸಿಲ್ವಾ 13ಕ್ಕೆ 1, ಬಿನುರ ಫೆರ್ನಾಂಡೊ 27ಕ್ಕೆ 1, ಚಮಿಕ ಕರುಣರತ್ನೆ 29ಕ್ಕೆ 1) ಶ್ರೀಲಂಕಾ 15 ಓವರ್‌ಗಳಲ್ಲಿ 1 ವಿಕೆಟ್‌ಗೆ 133 (ಕುಸಾಲ್‌ ಮೆಂಡಿಸ್‌ ಔಟಾಗದೆ 68, ಧನಂಜಯ ಡಿಸಿಲ್ವಾ 31, ಚರಿತ ಅಸಲಂಕಾ ಔಟಾಗದೆ 31, ಗರೆತ್ ಡೆಲನಿ 28ಕ್ಕೆ 1) ಫಲಿತಾಂಶ: ಶ್ರೀಲಂಕಾಕ್ಕೆ 9 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT