ನಾಕೌಟ್‌ ಮೇಲೆ ಕರ್ನಾಟಕ ಕಣ್ಣು

7
ಕೂಚ್‌ ಬೆಹರ್‌ ಕ್ರಿಕೆಟ್‌: ಮಧ್ಯಪ್ರದೇಶ ಎದುರು ಇಂದಿನಿಂದ ಪಂದ್ಯ

ನಾಕೌಟ್‌ ಮೇಲೆ ಕರ್ನಾಟಕ ಕಣ್ಣು

Published:
Updated:

ಬೆಳಗಾವಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಲ್ಲಿರುವ ಕರ್ನಾಟಕ ತಂಡ ಸೋಮವಾರ ಇಲ್ಲಿ ಆರಂಭವಾಗಲಿರುವ 19 ವರ್ಷದೊಳಗಿನವರ ಕೂಚ್‌ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ನಾಕೌಟ್‌ ಮೇಲೆ ಕಣ್ಣು ಇಟ್ಟಿದೆ.

ಆಟೊನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುವ ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಅಥವಾ ಗೆಲುವು ಸಾಧಿಸಿದರೂ ರಾಜ್ಯ ತಂಡ ನಾಕೌಟ್‌ ತಲುಪಲಿದೆ. ಕರ್ನಾಟಕ ತಂಡ
ಏಳು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಜಯಿಸಿದೆ. ನಾಲ್ಕು ಪಂದ್ಯಗಳು ಡ್ರಾ ಆಗಿದ್ದು, 26 ಅಂಕ ಕಲೆಹಾಕಿ ‘ಎ’ ಮತ್ತು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 

ಮಧ್ಯಪ್ರದೇಶ ತಂಡ ಒಟ್ಟು 25 ಅಂಕಗಳನ್ನು ಹೊಂದಿದ್ದು, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇದು ಕೊನೆಯ ಲೀಗ್‌ ಪಂದ್ಯ.

ಕರ್ನಾಟಕ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಹರಿಯಾಣ ಎದುರು ಜಯ ಪಡೆದಿತ್ತು. ಇದಕ್ಕೂ ಮೊದಲು ಪಂಜಾಬ್‌ ವಿರುದ್ಧ ಇನಿಂಗ್ಸ್‌ ಹಾಗೂ 200 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಇದೇ ಗುಂಪಿನಲ್ಲಿರುವ ಉತ್ತರ ಪ್ರದೇಶ (42 ಅಂಕ), ವಿದರ್ಭ (29), ಮಹಾರಾಷ್ಟ್ರ (27) ಮತ್ತು ಮುಂಬೈ (27) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳನ್ನು ಹೊಂದಿವೆ. ಆದ್ದರಿಂದ ನಾಕೌಟ್‌ ಪ್ರವೇಶಿಸಲು ಪೈಪೋಟಿ ಕೂಡ ಹೆಚ್ಚಿದೆ. ಎರಡೂ ತಂಡಗಳ ಸದಸ್ಯರು ಭಾನುವಾರ ಕಠಿಣ ಅಭ್ಯಾಸ ನಡೆಸಿದರು.

‘ಈ ಬಾರಿಯ ಲೀಗ್‌ ಹಂತದ ಮೊದಲ ಪಂದ್ಯದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದೇವೆ. ಇಲ್ಲಿಯೂ ಅದನ್ನು ಮುಂದುವರಿಸುತ್ತೇವೆ. ಆಟಗಾರರು ಕೂಡ ಆತ್ಮವಿಶ್ವಾಸದಲ್ಲಿದ್ದಾರೆ’ ಎಂದು ಕರ್ನಾಟಕ ತಂಡದ ಕೋಚ್‌ ದೀಪಕ್‌ ಚೌಗುಲೆ ವಿಶ್ವಾಸ ವ್ಯಕ್ತಪಡಿಸಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !