ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗ ಕೊನ್ ಡಿ ಲಾಂಗ್ ನಿಧನ

Last Updated 20 ಏಪ್ರಿಲ್ 2019, 20:11 IST
ಅಕ್ಷರ ಗಾತ್ರ

ಲಂಡನ್‌: ಸ್ಕಾಟ್ಲೆಂಡ್‌ ತಂಡದ ಕ್ರಿಕೆಟಿಗ ಕೊನ್ ಡಿ ಲಾಂಗ್ (38)ಶುಕ್ರವಾರ ನಿಧನರಾದರು.

ಅವರು 2017ರಿಂದ ಮಿದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದ ಲಾಂಗ್ ಸ್ಕಾಟ್ಲೆಂಡ್ ಸದಸ್ಯತ್ವ ಪಡೆದಿದ್ದರು. ಆಲ್‌ರೌಂಡರ್‌ ಆಗಿ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ನೈಟ್ಸ್ ಮತ್ತು ನಾರ್ತ್ಆ್ಯಮ್ಟನ್‌ಶೇರ್ ತಂಡವನ್ನು ಪ್ರತಿನಿಧಿಸಿದ್ದರು.

ಶ್ರೀಲಂಕಾ ವಿರುದ್ಧ ಸ್ಕಾಟ್ಲೆಂಡ್ ತನ್ನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ಜಯಿಸಲು ಲಾಂಗ್ ಅವರ ಕೊಡುಗೆ ಮಹತ್ವದ್ದಾಗಿತ್ತು.ಅವರನಿಧನ ಆಘಾತ ತಂದಿದೆ ಎಂದು ಕ್ರಿಕೆಟ್‌ ಸ್ಕಾಟ್ಲೆಂಡ್ ಮುಖ್ಯಸ್ಥ ಟೋನಿ ಬ್ರೇನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT