ಭಾನುವಾರ, ಡಿಸೆಂಬರ್ 8, 2019
21 °C
ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌: ರಾಜಸ್ಥಾನಕ್ಕೆ ಮೇಲುಗೈ

ಕೂಚ್‌ ಬೆಹಾರ್‌ ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ಸೋಲು ತಪ್ಪಿಸುವ ಸವಾಲು

Published:
Updated:
Deccan Herald

ಹುಬ್ಬಳ್ಳಿ: ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಆರಂಭದಲ್ಲಿಯೇ ಪ್ರಮುಖ ವಿಕೆಟ್‌ ಕಳೆದುಕೊಂಡಿರುವ ಕರ್ನಾಟಕ ತಂಡ 19 ವರ್ಷದ ಒಳಗಿನವರ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ರಾಜಸ್ಥಾನ ಎದುರಿನ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ 438 ರನ್ ಗಳಿಸಿತ್ತು. ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ 74.5 ಓವರ್‌ಗಳಲ್ಲಿ 212 ರನ್‌ ಗಳಿಸಿ ಆಲೌಟ್‌ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಬುಧವಾರದ ಅಂತ್ಯಕ್ಕೆ 27 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿದೆ.

ಒಂದು ದಿನದಾಟ ಬಾಕಿ ಉಳಿದಿದ್ದು, ಕರ್ನಾಟಕ ತಂಡ ಕೊನೆಯ ದಿನ ಆಲೌಟ್‌ ಆಗದಂತೆ ರಕ್ಷಣಾತ್ಮಕವಾಗಿ ಆಡಬೇಕಿದೆ.

ರಾಜ್ಯ ತಂಡ 97 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡಿತ್ತು. ಸಂಕಷ್ಟದ ಸಂದರ್ಭದಲ್ಲೂ ತಾಳ್ಮೆಯಿಂದ ಆಡಿದ ಆರ್‌. ಸ್ಮರಣ್‌ (95, 202ಎಸೆತ, 10 ಬೌಂಡರಿ, 1 ಸಿಕ್ಸರ್‌) ನೆರವಾದರು.

ಇಲ್ಲವಾದರೆ ಕರ್ನಾಟಕ ತಂಡದ ಇನಿಂಗ್ಸ್‌ ಹಿನ್ನಡೆಯ ರನ್‌ ಅಂತರ ಹೆಚ್ಚಾಗುತ್ತಿತ್ತು. ರಾಜಸ್ಥಾನದ ಮೊದಲ ಇನಿಂಗ್ಸ್‌ನ ರನ್‌ ಚುಕ್ತಾ ಮಾಡಲು ಆತಿಥೇಯರು 131 ರನ್‌ಗಳನ್ನು ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ಮೊದಲ ಇನಿಂಗ್ಸ್‌ 165.4 ಓವರ್‌ಗಳಲ್ಲಿ 438. ಕರ್ನಾಟಕ ಪ್ರಥಮ ಇನಿಂಗ್ಸ್‌ 74.5 ಓವರ್‌ಗಳಲ್ಲಿ 212 (ಆರ್‌. ಸ್ಮರಣ್‌ 95, ಕೃತಿಕ್ ಕೃಷ್ಣ 22, ಎಂ. ವೆಂಕಟೇಶ 32; ಆಕಾಶ ಸಿಂಗ್‌ 35ಕ್ಕೆ2, ಮನವ್‌ ಸುತಾರ 40ಕ್ಕೆ3, ರವಿ ಬಿಷ್ಣೋಯ್‌ 81ಕ್ಕೆ2, ರಜತ್‌ ಚೌಧರಿ 37ಕ್ಕೆ3) ಹಾಗೂ ದ್ವಿತೀಯ ಇನಿಂಗ್ಸ್‌ 27 ಓವರ್‌ಗಳಲ್ಲಿ 4 ವಿಕೆಟ್‌ಗೆ 95 (ಕೆ.ವಿ. ಅನೀಶ್‌ 45, ಆರ್‌. ಸ್ಮರಣ್‌ ಬ್ಯಾಟಿಂಗ್‌ 36; ಆಕಾಶ ಸಿಂಗ್‌ 8ಕ್ಕೆ2).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು