ಗುರುವಾರ , ಫೆಬ್ರವರಿ 27, 2020
19 °C

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್: ಕರ್ನಾಟಕದ ಬ್ಯಾಟಿಂಗ್‌ ವೈಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 121 ರನ್‌ಗಳಿಗೆ ಆಲೌಟಾಯಿತು. ಮೋಹಿತ್‌ ಶಿಬು (37ಕ್ಕೆ 5) ಅವರ ಮೊನಚಿನ ದಾಳಿಗೆ ಕರ್ನಾಟಕ ಕುಸಿಯಿತು.

ತನ್ನ ಮೊದಲ ಇನಿಂಗ್ಸ್‌ನಲ್ಲಿ 194 ರನ್‌ ಗಳಿಸಿದ್ದ ಕೇರಳ, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 114 ರನ್‌ ಗಳಿಸಿದೆ. ತಾಹಾ ಖಾನ್‌ (32ಕ್ಕೆ 4) ಅವರು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಪ್ರವಾಸಿ ತಂಡ ಇದೀಗ ಒಟ್ಟಾರೆ 187 ರನ್‌ಗಳ ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಕೇರಳ ಮೊದಲ ಇನಿಂಗ್ಸ್: 77.1 ಓವರ್‌ಗಳಲ್ಲಿ 194, ಎರಡನೇ ಇನಿಂಗ್ಸ್ 56 ಓವರ್‌ಗಳಲ್ಲಿ 7 ವಿಕೆಟ್‌ಗೆ 114 (ಜೆ.ಅನಂತಕೃಷ್ಣನ್ 38, ಅಭಿಷೇಕ್‌ ನಾಯರ್‌ 22, ನಿಖಿಲ್‌ ಜೋಸ್‌ ಬ್ಯಾಟಿಂಗ್ 24, ತಾಹಾ ಖಾನ್‌ 32ಕ್ಕೆ 4, ರೋಹಿತ್‌ ಕುಮಾರ್‌ 22ಕ್ಕೆ 2) ಕರ್ನಾಟಕ ಮೊದಲ ಇನಿಂಗ್ಸ್: 49.5 ಓವರ್‌ಗಳಲ್ಲಿ 121 (ಚಿರಾಗ್‌ ನಾಯಕ್ 24, ಕೆ.ವಿ.ಅನೀಶ್‌ 24, ಆರ್‌.ಸ್ಮರಣ್‌ 22, ಮೋಹಿತ್‌ ಶಿಬು 37ಕ್ಕೆ 5, ಅಖಿನ್‌ 34ಕ್ಕೆ 2, ಕಿರಣ್‌ ಸಾಗರ್‌ 37ಕ್ಕೆ 2).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು