ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA ಕ್ರಿಕೆಟ್ ಪಂದ್ಯಕ್ಕೆ ಕೊರೊನಾ ಭೀತಿ: ಟಿಕೆಟ್ ಮಾರಾಟ ಇಳಿಮುಖ

Last Updated 12 ಮಾರ್ಚ್ 2020, 9:33 IST
ಅಕ್ಷರ ಗಾತ್ರ
ADVERTISEMENT
""

ಧರ್ಮಶಾಲಾ:ಕೊರೊನಾ ವೈರಸ್‌ ಭೀತಿಯು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಏಕದಿನ ಪಂದ್ಯದ ಮೇಲೂ ಪರಿಣಾಮ ಭೀರಿದೆ. ಇದರಿಂದಾಗಿಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ನಡೆಯಲಿರುವಪಂದ್ಯದ ಟಿಕೆಟ್‌ ಮಾರಾಟ ಕುಸಿದಿದೆ.

ಸಾಮಾನ್ಯವಾಗಿ ಸೀಮಿತ ಓವರ್‌ಗಳ ಪಂದ್ಯಗಳ ಟಿಕೆಟ್‌ ಖರೀದಿಸಲು ಜನರು ಮುಗಿಬೀಳುತ್ತಾರೆ. ಆದರೆ, ಈ ಬಾರಿ ಇಲ್ಲಿ ಕೇವಲ 16 ಸಾವಿರ ಮಾತ್ರವೇ ಬಿಕರಿಯಾಗಿವೆ. ಒಟ್ಟು 22 ಸಾವಿರ ಟಿಕೆಟ್‌ಗಳುಮಾರಾಟಕ್ಕಿದ್ದವು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಮತ್ತುಚಳಿಗಾಳಿಯ ವಾತಾವರಣ ಇರುವುದರಿಂದಾಗಿಯೂ ಕೆಲವರು ಪಂದ್ಯದ ಟಿಕೆಟ್‌ ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಯೊಬ್ಬರು,‘ಸುಮಾರು ಒಂದು ಸಾವಿರ ವಿದೇಶಿ ಅಭಿಮಾನಿಗಳು ಇಲ್ಲಿಗೆ ಬರುವುದನ್ನು ರದ್ದುಗೊಳಿಸಿದ್ದಾರೆ. ಸ್ಥಳೀಯರು ಮತ್ತು ನೆರೆಯ ಪಂಜಾಬ್, ಹರಿಯಾಣ ಮತ್ತು ದೆಹಲಿಯ ಅಭಿಮಾನಿಗಳೂ ಈ ಬಾರಿ ಕ್ರೀಡಾಂಗಣದತ್ತ ಹೆಚ್ಚು ಬಂದಿಲ್ಲ. ಪೇಟಿಎಂ ಮೂಲಕ ಆನ್‌ಲೈನ್‌ ಟಿಕೆಟ್‌ ಪಡೆಯಲು ಅವಕಾಶ ಇದೆ. ಪ್ರತಿ ಬಾರಿ ಪಂದ್ಯ ನಡೆದಾಗಲೂ ಟಿಕೆಟ್‌ಗಳು ವೇಗವಾಗಿ ಖರ್ಚಾಗುತ್ತಿದ್ದವು. ಆದರೆ, ಈ ಬಾರಿ ನಿರಾಶಾದಾಯಕವಾಗಿದೆ’ ಎಂದಿದ್ದಾರೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್

ಪಂದ್ಯದ ವರದಿ ಮಾಡಲು ಈ ಬಾರಿದಕ್ಷಿಣ ಆಫ್ರಿಕಾದಿಂದ ಕ್ರೀಡಾ ಪತ್ರಕರ್ತರುಬಂದಿಲ್ಲ.ಈ ರೀತಿ ಆಗುತ್ತಿರುವುದು ಇದೇ ಮೊದಲುಎನ್ನಲಾಗಿದೆ.

‘ಕೊರೊನಾ ವೈರಸ್‌ ಮುಂಜಾಗ್ರತೆ ಕ್ರಮಗಳ ಜಾಗೃತಿಗಾಗಿ ಎಲ್ಲ ಕಡೆಯೂ ಮಾಹಿತಿ ಫಲಕಗಳನ್ನು, ಭಿತ್ತಿಚಿತ್ರಗಳನ್ನು ಹಾಕಲಾಗಿದೆ. ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT