ಮಂಗಳವಾರ, ಏಪ್ರಿಲ್ 7, 2020
19 °C

ಕೋವಿಡ್ ಪರಿಣಾಮ: ವಾರ್ಷಿಕ ಸಭೆ ಬದಲು ಕಾಲ್‌ ಕಾನ್ಫರೆನ್ಸ್‌ ನಡೆಸಲಿದೆ ಐಸಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಮಾರ್ಚ್‌ 26–29ರವರೆಗೆ ದುಬೈನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮಂಡಳಿಯ ವಾರ್ಷಿಕ ಸಭೆ ಬದಲಾಗಿ ಕಾಲ್‌ ಕಾನ್ಫರೆನ್ಸ್‌ ನಡೆಸಲು ಐಸಿಸಿ ನಿರ್ಧರಿಸಿದೆ. ಜಗತ್ತಿನಾದ್ಯಂತ ಆತಂಕ ಉಂಟುಮಾಡಿರುವ ಕೋವಿಡ್–19 ವೈರಸ್‌ ಭೀತಿಯಿಂದಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಕೋವಿಡ್‌–19 ಸೋಂಕು ಹರಡುವಿಕೆ ಮುಂದುವರಿದಿದೆ. ಈ ಸಂಬಂಧ ಸದಸ್ಯರು ಕಳವಳ ವ್ಯಕ್ತಪಡಿಸಿರುವುದು, ವೈರಸ್‌ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಅಗತ್ಯತೆಯನ್ನು ಸಾರಿದೆ. ಹಾಗಾಗಿ, ಮಾರ್ಚ್‌ ಅಂತ್ಯದಲ್ಲಿ ದುಬೈನಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆಯ ಬದಲು ಕಾಲ್‌ ಕಾನ್ಫರೆನ್ಸ್‌ ನಡೆಸಲು ನಿರ್ಧರಿಸಲಾಗಿದೆ’ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

‘ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ವಿವಿಧ ಸಮಿತಿಗಳನ್ನೊಳಗೊಂಡ ಪೂರ್ಣಪ್ರಮಾಣದ ಸಭೆಯನ್ನು ಮೇ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಭೆಗಳ ವೇಳಾಪಟ್ಟಿಯನ್ನು ಮೇ ತಿಂಗಳಲ್ಲಿ ನಡೆಸಲು ಪರಿಶೀಲನೆ ನಡೆಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು