ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಹಸಿರು ನಿಶಾನೆ: ಅಭ್ಯಾಸ ಆರಂಭಿಸಿದ ವಿಂಡೀಸ್‌ ಕ್ರಿಕೆಟಿಗರು

Last Updated 26 ಮೇ 2020, 11:06 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್‌: ಲಾಕ್‌ಡೌನ್‌ ಕಾರಣ ‘ಗೃಹಬಂಧಿ’ಗಳಾಗಿದ್ದ ವೆಸ್ಟ್‌ ಇಂಡೀಸ್‌‌ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ವಿಂಡೀಸ್‌ ತಂಡವು ಟೆಸ್ಟ್‌ ಸರಣಿಯನ್ನು ಆಡಲು ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ತಂಡ ಈಗಿನಿಂದಲೇ ತಾಲೀಮು ಶುರುಮಾಡಿದೆ.

ನಾಯಕ ಜೇಸನ್‌ ಹೋಲ್ಡರ್, ಕ್ರೆಗ್‌ ಬ್ರಾಥ್‌ವೇಟ್‌, ಶಾಯ್‌ ಹೋಪ್‌, ಕೆಮರ್‌ ರೋಚ್‌, ಶೇನ್‌ ಡೌರಿಚ್‌, ಶಮರಾಹ್‌ ಬ್ರೂಕ್ಸ್‌ ಮತ್ತು ರೇಮಂಡ್‌ ರೀಫರ್‌ ಅವರು ಸೋಮವಾರ ಕಿಂಗ್ಸ್‌ಟನ್‌ ಓವಲ್‌ ಮೈದಾನದ ನೆಟ್ಸ್‌ನಲ್ಲಿ ಬೆವರು ಸುರಿಸಿದರು. ಖಾಲಿ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಸಹಾಯಕ ಕೋಚ್‌ ರಾಡಿ ಎಸ್ಟ್‌ವಿಕ್‌ ಅವರು ಆಟಗಾರರಿಗೆ ಮಾರ್ಗದರ್ಶನ ನೀಡಿದರು.

‘ಸ್ಥಳೀಯ ಸರ್ಕಾರದ ಅನುಮತಿ ದೊರೆತ ಬಳಿಕ ಆಟಗಾರರ ಅಭ್ಯಾಸಕ್ಕೆ ಹಸಿರು ನಿಶಾನೆ ತೋರಲಾಗಿದೆ. ತಾಲೀಮಿನ ವೇಳೆ ಆಟಗಾರರೆಲ್ಲಾ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಿದ್ದಾರೆ’ ಎಂದು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ (ಸಿಡಬ್ಲ್ಯುಐ) ಪ್ರಕಟಣೆಯಲ್ಲಿ ತಿಳಿಸಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಆಟಗಾರರೆಲ್ಲಾ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಒತ್ತು ನೀಡಿದ್ದರು. ಇದಕ್ಕಾಗಿ ಮನೆಯಲ್ಲೇ ಅಗತ್ಯ ವ್ಯಾಯಾಮಗಳನ್ನು ಮಾಡುತ್ತಿದ್ದರು. ನೆಟ್ಸ್‌ನಲ್ಲಿ ತಾಲೀಮು ನಡೆಸಲು ಅನುಮತಿ ಸಿಕ್ಕಿರುವುದರಿಂದ ಅವರೆಲ್ಲಾ ಪುಳಕಿತರಾಗಿದ್ದಾರೆ. ಇದರಿಂದ ನಮಗೂ ಖುಷಿಯಾಗಿದೆ’ ಎಂದು ಸಿಡಬ್ಲ್ಯುಐ ಸಿಇಒ ಜಾನಿ ಗ್ರೇವ್ ಹೇಳಿದ್ದಾರೆ.

‘ಇಂಗ್ಲೆಂಡ್‌ ಎದುರಿನ ಮೂರು ಪಂದ್ಯಗಳ ಟೆಸ್ಟ್‌ ಸರಣಿಯು ನಿಗದಿತ ವೇಳಾಪಟ್ಟಿಯ ಪ್ರಕಾರವೇ ನಡೆಯುವ ವಿಶ್ವಾಸವಿದೆ. ಈ ಸಂಬಂಧ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ (ಇಸಿಬಿ) ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT