ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಕ್ರಿಕೆಟಿಗರಿಂದ ಪರಿಹಾರ ಕಾರ್ಯ

Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‍ಪುಣೆ: ಮಹಾರಾಷ್ಟ್ರದ ಕೆಲವು ಕ್ರಿಕೆಟಿಗರು ಒಂದುಗೂಡಿ ‘ಗೇಮ್‌ಚೇಂಜರ್ಸ್‌ ರಿಲೀಫ್ ಫಂಡ್’ ಮೂಲಕ ಹಣ ಸಂಗ್ರಹಿಸಿ ಕೊವಿಡ್ –19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಡವರಿಗೆ ಪರಿಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

‘ನಾವು ಇಲ್ಲಿಯವರೆಗೆ ₹1.50 ಲಕ್ಷ ಸಂಗ್ರಹಿಸಿದ್ದೇವೆ. ಆಟದ ಮೈದಾನಗಳ ಉಸ್ತುವಾರಿ ನೋಡಿಕೊಳ್ಳುವ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಕೊಳಗೆರಿಯ ನಿವಾಸಿಗಳಿಗೆ ದಿನಸಿ ವಿತರಣೆ ಮಾಡುತ್ತೇವೆ’ ಎಂದು ತಂಡದಲ್ಲಿರುವ ರಣಜಿ ಆಟಗಾರ ನೌಷಾ್ದ್‌ ಶೇಖ್ ಹೇಳಿದ್ದಾರೆ.

‘ಮಹಾರಾಷ್ಟ್ರದ ಗಣ್ಯ ಉದ್ಯಮಿ ಪುನಿತ್ ಬಾಲನ್ ಅವರು ₹ 50 ಸಾವಿರ ಕೊಟ್ಟಿದ್ದಾರೆ. ವಿದರ್ಭ ಕ್ರಿಕೆಟ್ ತಂಡದ ಆಟಗಾರ ಆದಿತ್ಯ ಸರವಟೆ, ಕೇರಳ ಆಟಗಾರ ಪ್ರಶಾಂತ್ ಪರಮೇಶ್ವರ್, ಪಂಜಾಬ್ ತಂಡದ ಮನನ್ ವೊಹ್ರಾ, ನಮ್ಮ ತಂಡದ ಋತುರಾಜ್ ಗಾಯಕವಾಡ್, ಸತ್ಯಜೀತ್ ಬಚ್ಚಾವ್ ಅವರೂ ನೆರವು ನೀಡಿದ್ದಾರೆ. ಬಹಳಷ್ಟು ಆಟಗಾರರು ಬೆಂಬಲಿಸುತ್ತಿದ್ದಾರೆ’ ಎಂದು ನೌಷಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT