ಕುತೂಹಲ ಘಟ್ಟದಲ್ಲಿ ‘ಟೆಸ್ಟ್‌’

7
ಕ್ರಿಕೆಟ್: ಟ್ರಾವಿಸ್ ಅರ್ಧಶತಕ; ಮೊಹಮ್ಮದ್‌ ಸಿರಾಜ್‌ಗೆ ಒಟ್ಟು 11 ವಿಕೆಟ್‌

ಕುತೂಹಲ ಘಟ್ಟದಲ್ಲಿ ‘ಟೆಸ್ಟ್‌’

Published:
Updated:
Deccan Herald

ಬೆಂಗಳೂರು: ಬುಧವಾರವು ಕ್ರಿಕೆಟ್‌ ಪ್ರಿಯರ ಪಾಲಿಗೆ ಕುತೂಹಲದ ದಿನವಾಗುವ ನಿರೀಕ್ಷೆ ಗರಿಗೆದರಿದೆ. ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ’ಎ’ ತಂಡಗಳಿಗೆ ಜಯಿಸುವ ಸಮಾನ ಅವಕಾಶ ಇದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ’ಟೆಸ್ಟ್‌’ನಲ್ಲಿ ಗೆಲ್ಲಲು 262 ರನ್‌ಗಳ ಗುರಿ ಬೆನ್ನತ್ತಿರುವ ಭಾರತ ಎ ತಂಡವು ಇನ್ನೂ 199 ರನ್‌ಗಳನ್ನು ಗಳಿಸಬೇಕು. ಇಲ್ಲದಿದ್ದರೆ ಆಲೌಟ್‌ ಆಗದಂತೆ ಎಚ್ಚರ ವಹಿಸಿ ಪಂದ್ಯವನ್ನು ಡ್ರಾ ಕೂಡ ಮಾಡಿಕೊಳ್ಳಬಹುದು. ಆತಿಥೇಯ ತಂಡದ ಉಳಿದಿರುವ ಎಂಟು ವಿಕೆಟ್‌ಗಳನ್ನು ಕಬಳಿಸಿದರೆ ಆಸ್ಟ್ರೇಲಿಯಾ ’ಎ’ ಜಯಿಸುವುದು ಖಚಿತ.

ಪಂದ್ಯದ ಮೂರನೇ ದಿನವಾದ ಮಂಗಳವಾರ ಟ್ರಾವಿಸ್ ಹೆಡ್ (87; 162 ಎಸೆತ; 13ಬೌಂಡರಿ) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ಎ ತಂಡವು ಎರಡನೇ ಇನಿಂಗ್ಸ್‌ನಲ್ಲಿ 292 ರನ್‌ ಗಳಿಸಿತು. ಮೊಹಮ್ಮದ್ ಸಿರಾಜ್ (77ಕ್ಕೆ3), ಸ್ಪಿನ್ನರ್ ಕೆ.ಗೌತಮ್ (53ಕ್ಕೆ2) ಹಾಗೂ ಕುಲದೀಪ್ ಯಾದವ್ (51ಕ್ಕೆ2) ಅವರ ಬೌಲಿಂಗ್‌ನಿಂದ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.  

ಸಂಜೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆರ್. ಸಮರ್ಥ್ ಬದಲು ಇನಿಂಗ್ಸ್‌ ಆರಂಭಿಸಿದ ಅಭಿಮನ್ಯು  ಈಶ್ವರನ್  ಸೊನ್ನೆ ಸುತ್ತಿದರು. ಮಯಂಕ್ ಅಗರವಾಲ್ (ಬ್ಯಾಟಿಂಗ್ 25) ಮತ್ತು ಶ್ರೇಯಸ್ ಅಯ್ಯರ್ (28; 21ಎಸೆತ) ಅವರೊಂದಿಗೆ ಎರಡನೇ ವಿಕೆಟ್‌ಗೆ 33 ರನ್‌ ಸೇರಿಸಿದರು. ಆದರೆ, 10ನೇ ಓವರ್‌ನಲ್ಲಿ  ಅಯ್ಯರ್ ಅವರು ಜಾನ್‌ ಹಾಲೆಂಡ್ ಎಸೆತದಲ್ಲಿ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಅಂಕಿತ್ ಭಾವ್ನೆ (ಬ್ಯಾಟಿಂಗ್ 6) ಮತ್ತು ಮಯಂಕ್ ಕ್ರೀಸ್‌ನಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !