ಕ್ವಾರ್ಟರ್‌ಗೆ ಮಯಂಕ್‌ ಅಲಭ್ಯ

7

ಕ್ವಾರ್ಟರ್‌ಗೆ ಮಯಂಕ್‌ ಅಲಭ್ಯ

Published:
Updated:

ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿ ಗಮನ ಸೆಳೆದ ಮಯಂಕ್ ಅಗರವಾಲ್ ಇದೇ 15ರಿಂದ ಇಲ್ಲಿ ನಡೆಯಲಿರುವ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಅವರು ಕೈನ ಹೆಬ್ಬೆರಳಿಗೆ ಆಗಿರುವ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

‘ಮಯಂಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಎನ್‌ಸಿಎ ಅವರಿಗೆ ಫಿಟ್‌ನೆಸ್‌ ಪ್ರಮಾಣಪತ್ರ ನೀಡಿಲ್ಲ’ ಎಂದು ಕೆಎಸ್‌ಸಿಎ ಹಂಗಾಮಿ ಕಾರ್ಯ ದರ್ಶಿ ಸುಧಾಕರ್ ರಾವ್ ತಿಳಿಸಿದ್ದಾರೆ.

ಛತ್ತೀಸಗಡ ಎದುರಿನ ಲೀಗ್ ಪಂದ್ಯದಲ್ಲಿ ಗಾಯಗೊಂಡಿದ್ದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ತಂಡಕ್ಕೆ ಮರಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಮನೀಷ್ ಬಳಗವು ರಾಜಸ್ಥಾನ ಎದುರು ಆಡಲಿದೆ.

ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್, ಆರ್. ವಿನಯಕುಮಾರ್, ಡಿ. ನಿಶ್ಚಲ್, ಕರುಣ್ ನಾಯರ್, ಆರ್. ಸಮರ್ಥ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೆ.ಗೌತಮ್, ಪ್ರಸಿದ್ಧ ಎಂ ಕೃಷ್ಣ, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್, ಬಿ.ಆರ್. ಶರತ್, ಶರತ್ ಶ್ರೀನಿವಾಸ್ (ಇಬ್ಬರೂ ವಿಕೆಟ್‌ಕೀಪರ್), ಪವನ್ ದೇಶಪಾಂಡೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !