ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಹಿನ್ನಡೆ ಭೀತಿಯಲ್ಲಿ ಕರ್ನಾಟಕ

ಕೂಚ್‌ ಬೆಹರ್ ಟ್ರೋಫಿ ಕ್ರಿಕೆಟ್‌: ಇಶಾನ್‌ಗೆ ನಾಲ್ಕು ವಿಕೆಟ್‌
Last Updated 22 ಜನವರಿ 2019, 19:01 IST
ಅಕ್ಷರ ಗಾತ್ರ

ಬೆಳಗಾವಿ: ವೇಗಿ ಇಶಾನ್ ಅಫ್ರಿದಿ (31ಕ್ಕೆ4) ಕರಾರುವಾಕ್ಕಾದ ಬೌಲಿಂಗ್‌ ಎದುರು ಪರದಾಡಿದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್‌ ಬೆಹರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮಧ್ಯಪ್ರದೇಶ ಎದುರಿನ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿದೆ.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಧ್ಯಪ್ರದೇಶ ಪ್ರಥಮ ಇನಿಂಗ್ಸ್‌ನಲ್ಲಿ 107 ಓವರ್‌ಗಳಲ್ಲಿ 275 ರನ್ ಗಳಿಸಿತು. ಸೋಮವಾರದ ಅಂತ್ಯಕ್ಕೆ 90 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿತ್ತು.

ಕರ್ನಾಟಕ ತಂಡ ಎರಡನೇ ದಿನವಾದ ಮಂಗಳವಾರ 69 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿದೆ. ರಾಜ್ಯ ತಂಡದ ಇನಿಂಗ್ಸ್‌ ಮುನ್ನಡೆಗೆ 123 ರನ್‌ ಅಗತ್ಯವಿದೆ.

105 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಮಧ್ಯಪ್ರದೇಶ ತಂಡದ ದೇವ್ ಬರ್ನಲ್‌, ಮಂಗಳವಾರ 11 ಎಸೆತ ಎದುರಿಸಿದರೂ ರನ್‌ ಗಳಿಸಲಾಗಲಿಲ್ಲ. ಎಂ. ವೆಂಕಟೇಶ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ಹೊರನಡೆದರು. ಉಳಿದವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆರಂಭದಲ್ಲಿಯೇ ಕರ್ನಾಟಕ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದು ಕೊಂಡಿತು. ನಾಯಕ ದೇವದತ್‌ ಪಡಿಕ್ಕಲ್ (36) ಹಾಗೂ ರೋಹನ್ ನಾಯ್ಕರ್‌ (21) ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದರು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಇಶಾನ್ ಅಫ್ರಿದಿ ಬೌಲಿಂಗ್ ಮುಂದೆ ಮಂಕಾದರು. ಶುಭಾಂಗ್‌ ಹೆಗ್ಡೆ (ಬ್ಯಾಟಿಂಗ್ 33) ಮತ್ತು ಬಾಲಂಗೋಚಿಗಳ ಮೇಲೆ ಕರ್ನಾಟಕದ ಇನಿಂಗ್ಸ್‌ ಮುನ್ನಡೆಯ ಆಸೆ ಅವಲಂಬಿತವಾಗಿದೆ. ನಾಕೌಟ್‌ ಪ್ರವೇಶಿಸಲು ಕರ್ನಾಟಕ ಇನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಬೇಕು ಅಥವಾ ಜಯಿಸಬೇಕು.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್‌ 107 ಓವರ್‌ಗಳಲ್ಲಿ 275. ಕರ್ನಾಟಕ ಪ್ರಥಮ ಇನಿಂಗ್ಸ್‌ 69 ಓವರ್‌ಗಳಲ್ಲಿ 7 ವಿಕೆಟ್‌ಗೆ 153 (ದೇವದತ್‌ ಪಡಿಕ್ಕಲ್‌ 36, ರೋಹನ್‌ ನಾಯ್ಕರ್‌ 21, ಮುನಿಮ್‌ ಮೆಹದಿ 31, ಶುಭಾಂಗ್‌ ಹೆಗ್ಡೆ ಬ್ಯಾಟಿಂಗ್‌ 33; ಇಶಾನ್ ಅಫ್ರಿದಿ 31ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT