ಮಂಗಳವಾರ, ಆಗಸ್ಟ್ 20, 2019
25 °C

ವೆಸ್ಟ್‌ ಇಂಡೀಸ್–ಪಾಕಿಸ್ತಾನ ಹಣಾಹಣಿ ಇಂದು

Published:
Updated:

ನಾಟಿಂಗಂ, ಇಂಗ್ಲೆಂಡ್: ಸ್ಪೋಟಕ ಬ್ಯಾಟ್ಸ್‌ಮನ್‌ಗಳ ದಂಡು ಇರುವ ವೆಸ್ಟ್‌ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಶುಕ್ರವಾರ  ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಜೇಸನ್ ಹೋಲ್ಡರ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವು ಈಚೆಗೆ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 411 ರನ್‌ಗಳನ್ನು ಬಾರಿಸಿ ಗಮನ ಸೆಳೆದಿತ್ತು. ಕ್ರಿಸ್‌ ಗೇಲ್, ಶಾಯ್ ಹೋಪ್, ಕಾರ್ಲೋಸ್ ಬ್ರಾಥ್‌ವೈಟ್ , ಆ್ಯಂಡ್ರೆ ರಸೆಲ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ.

ವಿಂಡೀಸ್ ತಂಡವು 1975 ಮತ್ತು 1979ರಲ್ಲಿ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. 2016ರಲ್ಲಿ ವಿಶ್ವ  ಟ್ವೆಂಟಿ–20 ಚಾಂಪಿಯನ್‌ಷಿಪ್‌ನಲ್ಲಿ ವಿಂಡೀಸ್ ಪ್ರಶಸ್ತಿ ಗೆದ್ದಿತ್ತು.

ಪಾಕಿಸ್ತಾನ ತಂಡವು 1992ರ ನಂತರ ಮತ್ತೆ ವಿಶ್ವಕಪ್ ಗೆದ್ದಿಲ್ಲ. ಎರಡು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದಿದ್ದ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕ್ ತಂಡವು ಪ್ರಶಸ್ತಿ ಗಳಿಸಿತ್ತು. ಆಗ ತಂಡದ ನಾಯಕರಾಗಿದ್ದ ಸರ್ಫರಾಜ್ ಅಹಮದ್ ಈಗಲೂ ಮುಂದಾಳತ್ವ ವಹಿಸಿದ್ದಾರೆ.

ಟೂರ್ನಿಯಲ್ಲಿ ಎರಡೂ ತಂಡಗಳಿಗೂ ಇದು ಮೊದಲ ಪಂದ್ಯ. ಗೆಲುವಿನೊಂದಿಗೆ ಆಭಿಯಾನ ಆರಂಭಿಸುವ ಹುಮ್ಮಸ್ಸಿನಲ್ಲಿವೆ. ಆದ್ದರಿಂದ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

Post Comments (+)